ಪ್ರತಿ ಸಿನಿಮಾ ಬಿಡುಗಡೆಯಾದಾಗಲೂ ಆತಂಕ ಹೆಚ್ಚಾಗುತ್ತದೆ: ನಟಿ ಸಮಂತಾ| Tollywood

Samantha
Published on

Tollywood: ಟಾಲಿವುಡ್​ ನಟಿ ಸಮಂತಾ AIMAನ ರಾಷ್ಟ್ರೀಯ ನಾಯಕತ್ವ ಸಮಾವೇಶವೊಂದರಲ್ಲಿ ತಮ್ಮ ಸ್ನಾಯುಗಳ ಮೇಲೆ ಪರಿಣಾಮ ಬೀರುವಂತಹ ಸ್ವಯಂ ನಿರೋಧಕ ಸ್ಥಿತಿಯಾದ ಮಯೋಸಿಟಿಸ್‌ನೊಂದಿಗೆ ಬದುಕುವ ಸಾಗಿಸುತ್ತಿರುವುದರ ಬಗ್ಗೆ ಅನುಭವವನ್ನು ಹಂಚಿಕೊಂಡಿದ್ದಾರೆ.

ಅವರ ಜೀವನದಲ್ಲಿ ಏನಾಗುತ್ತಿದೆ?

ನಟಿ ಆರೋಗ್ಯ ಸವಾಲುಗಳನ್ನು ಎದುರಿಸುತ್ತಿದ್ದರೂ ಸಹ ಎಂದಿಗಿಂತಲೂ ಹೆಚ್ಚು ಬಲಶಾಲಿಯಾಗಿದ್ದೇನೆ ಹಾಗೂ ಜೀವನ ಮತ್ತು ದೃಷ್ಟಿಕೋನದ ಬಗ್ಗೆ ಹೊಸ ಚಿಂತನೆಗಳನ್ನು ಬೆಳೆಸಿಕೊಂಡಿದ್ದಾನೆ ಎಂದು ತಿಳಿಸಿದರು.

AIMA ಲೀಡರ್‌ಶಿಪ್ ಕಾನ್ಕ್ಲೇವ್‌ನಲ್ಲಿ ಮಾತನಾಡಿದ ಸಮಂತಾ, ನ್ನನಿಂದ ಸಾಧ್ಯವಾದಷ್ಟು ಕೆಲಸ ಮಾಡಲು ನಿರರ್ಗಳವಾಗಿ ಶ್ರಮಿಸುತ್ತಿದ್ದೇನೆ. ಈ ವೇಳೆ ನನ್ನಿಂದ ನಾನು ಹೇಗೆ ಹಿಂದೆ ಸರಿದಿದ್ದೇನೆ ಎಂಬುದರ ಬಗ್ಗೆ ಕೆಲವೊಂದು ವಿಚಾರಗಳನ್ನು ಸ್ಪಷ್ಟೀಕರಿಸುತ್ತೇನೆ ಎಂದರು.

ಈ ಮೊದಲೆಲ್ಲಾ ನನ್ನ ಆವೃತ್ತಿಯಲ್ಲಿ ಬಹುಶಃ ಒಂದು ವರ್ಷದಲ್ಲಿ 5 ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಏಕೆಂದರೆ ಅದು ಯಶಸ್ವಿ ನಟನ ಸಂಕೇತವಾಗಿ ಕಾಣಿಸುತ್ತಿದ್ದವು. ಈ ಎಲ್ಲಾ ಚಿತ್ರಗಳೂ ಸಹ ಬ್ಲಾಕ್‌ಬಸ್ಟರ್ ಪಡೆಯುತ್ತಿದ್ದವು ಹಾಗೂ ನಟರನ್ನು ಟಾಪ್​ 10 ಪಟ್ಟಿಯಲ್ಲಿರಿಸುತ್ತಿದ್ದವು. ಈ ಎಲ್ಲಾ ಯಶಸ್ವಿ ಪ್ರದರ್ಶನ ನನ್ನನ್ನು ನಾನು ಗುರುತಿಸಿಕೊಳ್ಳಲು ಸಹಾಯವಾಗುತ್ತಿತ್ತು. ಹಾಗೆಯೇ ಬಹುರಾಷ್ಟ್ರೀಯ ಬ್ರಾಂಡ್​ಗಳಲ್ಲಿ ಕಾರ್ಯನಿರ್ವಹಿಸಲು ಇದು ಸಹಾಯ ಮಾಡುತ್ತಿತ್ತು ಎಂದು ಹೇಳಿದರು.

ಆದರೆ, ಇಂದು ನ್ನನ ಬಳಿ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಹಾಗೇ ನಾನು ಯಾವುದೇ ಪಟ್ಟಿಯಲ್ಲೂ ಇಲ್ಲ. ನನ್ನ ಬಳಿ 1000 ಕೋಟಿ ಚಿತ್ರಗಳು ಸಹ ಇಲ್ಲ. ಆದರೆ, ಈವರೆಗೂ ಅತೀ ಸಂತೋಷದಿಂದ ಜೀವನವನ್ನು ಸಾಗಿಸುವ ವ್ಯಕ್ತಿ ನಾನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಒಬ್ಬ ನಟಿಯಾಗಿ ನನಗೆ ಅಲ್ಪಾವಧಿಯ ಜೀವನವಿದೆ ಎಂದು ನಾನು ಭಾವಿಸುತ್ತೇನೆ. ತಾರಾಪಟ್ಟ, ಖ್ಯಾತಿ ಮತ್ತು ಮನ್ನಣೆ ಇವೆಲ್ಲಾ ನಮಗೆ ದೊರೆತಂತಹ ವರವಾಗಿದೆ. ಹಾಗೆಯೇ ಸ್ವಲ್ಪ ಸಮಯದವರೆಗೂ ಇದೆಲ್ಲವೂ ನನ್ನದು ಎಂದು ಭಾವಿಸಬಹುದು. ಆದರೆ, ಅದೆಲ್ಲಾ ನಿಜವಲ್ಲ. ಇದು ನಟಿಯಾದಾಗ ಬರುವಂತಹ ಅದೃಷ್ಟ ಹಾಗೂ ಅನುಗ್ರಹ ಎಂದಿದ್ದಾರೆ.

ಇದೆಲ್ಲವೂ ಸಂಪೂರ್ಣವಾಗಿ ನಮ್ಮದಲ್ಲ ಬದಲಾಗಿ, ಚಿತ್ರ ಮುನ್ನಡೆ ಸಾಧಿಸಲು ಪಯತ್ನ ಪಟ್ಟವರದು. ಇನ್ನು ನನ್ನ ಜೀವವಿತಾವಧಿಗಿಂತ ದೊಡ್ಡ ಪರಿಣಾಮವನ್ನು ಸೃಷ್ಟಿಸಲು ನಾನು ಬಯಸುತ್ತೇನೆ ಎಂದರು.

ಹಿನ್ನೆಲೆ

ಸಂದರ್ಶನದಲ್ಲಿ ಸಮಂತಾ ತನ್ನ ವೃತ್ತಿಜೀವನದ ಆರಂಭದಲ್ಲಿ ಮಾನಸಿಕ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರಿತು ಎಂಬುದರ ಬಗ್ಗೆ ಮಾತನಾಡಿದರು. ನಾನು ತುಂಬಾ ದುರ್ಬಲಳಾಗಿದ್ದೆ. ಪ್ರತಿ ಶುಕ್ರವಾರವೂ ಭಯದಿಂದ ಕಾಲ ಕಳೆಯುತ್ತಿದ್ದೆ. ನಾಳೆ ಯಾರಾದರೂ ನನ್ನ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಎಂಬ ಆತಂಕ ನನ್ನಲ್ಲಿ ಮನೆ ಮಾಡಿತ್ತು ಎಂದು ವಿವರಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net