ತುಂಗೆ ಭರ್ತಿಯಿಂದ ಆತಂಕ ದೂರ: ಬಿವೈಆರ್

byr
ತುಂಗಾ ಜಲಾಶಯಕ್ಕೆ ಬಿ.ವೈ.ರಾಘವೇಂದ್ರ ಬಾಗಿನ ಸಮರ್ಪಿಸಿದರು. ಆರಗ ಜ್ಞಾನೇಂದ್ರ, ಡಿ.ಎಸ್.ಅರುಣ್, ಎಸ್.ಎನ್.ಚನ್ನಬಸಪ್ಪ, ಪವಿತ್ರಾ ರಾಮಯ್ಯ, ಟಿ.ಡಿ.ಮೇಘರಾಜ್, ಕೆ.ಬಿ.ಅಶೋಕ ನಾಯ್ಕ, ಎಸ್.ದತ್ತಾತ್ರಿ, ಸಂತೋಷ್ ಬಳ್ಳೇಕೆರೆ ಇತರರಿದ್ದರು.
Published on

ಶಿವಮೊಗ್ಗ: ತುಂಗೆ ತುಂಬಿರುವುದರಿಂದ ಈ ಬಾರಿ ರೈತರ ಹರ್ಷಕ್ಕೆ ಪಾರವೇ ಇಲ್ಲದಂತಾಗಿದೆ. ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ತುಂಗಾ ಜಲಾಶಯ ನಮ್ಮ ಜಿಲ್ಲೆಯಲ್ಲಿರುವುದು ನಮ್ಮೆಲ್ಲರ ಪುಣ್ಯ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಗಾಜನೂರು ತುಂಗಾ ಜಲಾಶಯಕ್ಕೆ ಬಾಗಿನ ಸಮರ್ಪಿಸಿದ ಬಳಿಕ ಮಾತನಾಡಿದ ಅವರು, ತುಂಗೆ ಅಕ್ಷರಶಃ ಜೀವನದಿ. ಶಿವಮೊಗ್ಗ ನಾಗರಿಕರ ಪಾಲಿಗೆ ತುಂಗಾಪಾನದ ಅದೃಷ್ಟ ದೊರೆತಿದೆ. ಆಕೆ ಮುನಿದರೆ ಗುಟುಕು ನೀರಿಗೂ ಪರದಾಡಬೇಕಾಗುತ್ತದೆ. ಈ ಬಾರಿಯೂ ಜಲಾಶಯ ಭರ್ತಿಯಾಗಿರುವುದರಿಂದ ಆತಂಕ ದೂರವಾಗಿದೆ. ಕಳೆದ ಬಾರಿ ಬರಗಾಲವಿತ್ತು, ರೈತರ ಕಣ್ಣಿನಲ್ಲಿ ನೀರಿತ್ತು. ಈ ವರ್ಷ ಉತ್ತಮ ಮಳೆಯಾಗಿರುವುದು ರೈತ ಸಮೂಹದಲ್ಲಿ ಹರ್ಷ ತಂದಿದೆ. ಸುಮಾರು 80 ಸಾವಿರ ಹೆಕ್ಟೇರ್‌ಗೆ ತುಂಗಾ ಜಲಾಶಯ ನೀರುಣಿಸುತ್ತದೆ ಎಂದು ಹೇಳಿದರು.
ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರ ಪಾಲಿಕೆ ಮಾಜಿ ಸದಸ್ಯೆ ಅನಿತಾ ರವಿಶಂಕರ್, ಸ್ಲಂ ಬೋರ್ಡ್ ಮಾಜಿ ನಿರ್ದೇಶಕಿ ಗೀತಾ ರವೀಂದ್ರ, ಬಿಜೆಪಿ ರಾಜ್ಯ ಪ್ರಕೋಷ್ಟಗಳ ಸಂಯೋಜಕ ಎಸ್.ದತ್ತಾತ್ರಿ, ಭದ್ರಾ ಕಾಡಾ ಮಾಜಿ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಪ್ರಮುಖರಾದ ಸಂತೋಷ್ ಬಳ್ಳೇಕೆರೆ, ದಿವಾಕರ ಶೆಟ್ಟಿ, ರಾಜೇಶ್ ಕಾಮತ್, ಕೆ.ವಿ.ಅಣ್ಣಪ್ಪ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net