ಅನುಷ್ಕಾ ಶೆಟ್ಟಿ ಫೇಸ್​ಬುಕ್ ಪೇಜ್​ನಲ್ಲಿ ಈ ಸಲ ಕನ್ನಡ ಮಿಸ್ಸಾಯ್ತು; ಯಾಕೆ ಎಂಬುದನ್ನು ನೀವೇ ನೋಡಿ..

Anushka-Shetty-to-tie-the-knot-with-mystery-cricketer
Published on

ಬೆಂಗಳೂರು: ನಟಿ ಅನುಷ್ಕಾ ಶೆಟ್ಟಿ ಅಪ್ಪಟ ಕನ್ನಡತಿ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಒಂದೇ ಒಂದು ಕನ್ನಡ ಸಿನಿಮಾ ಮಾಡಿಲ್ಲ ಎಂದರೂ, ಕನ್ನಡಿಗರ ಹೃದಯ ಗೆದ್ದಿದ್ದಾರೆ, ಕದ್ದಿದ್ದಾರೆ. ಹೌದು, ಯಾವುದೇ ಹಬ್ಬ ಹರಿದಿನ ಬರಲಿ ಏನೇ ರಾಷ್ಟ್ರೀಯ ದಿನಾಚರಣೆಗಳು ಇರಲಿ, ಮೊದಲಿಗೆ ಕನ್ನಡದಲ್ಲೇ ಸಂದೇಶ ಟೈಪಿಸಿ ರವಾನಿಸುತ್ತಿದ್ದರು. ಕನ್ನಡಾಭಿಮಾನವನ್ನು ಹೊರಹಾಕುತ್ತಿದ್ದರು. ಇತ್ತೀಚೆಗೆ ಅಂದರೆ ಏಪ್ರಿಲ್ 14ರಂದು ತುಳು ಹೊಸ ವರ್ಷದ ಪ್ರಯುಕ್ತ ಕನ್ನಡ ಲಿಪಿಯಲ್ಲಿ ತುಳು ಬರೆದು ಶುಭಾಶಯ ಕೋರಿದ್ದರು. ಆದರೆ, ಇಂದು ಅನುಷ್ಕಾ ಶೆಟ್ಟಿ ತಂದೆ ವಿಠಲ್​ ಶೆಟ್ಟಿ ಅವರ ಜನ್ಮ ದಿನ. ಈ ಶುಭ ದಿನದಂದು ಫೇಸ್​ಬುಕ್​ನಲ್ಲಿ ಕನ್ನಡದಲ್ಲೇ ಶುಭಾಶಯ ಕೋರಲಿದ್ದಾರೆ ಎಂದೇ ಅಭಿಮಾನಿಗಳು ಭಾವಿಸಿದ್ದರು. ಆದರೆ, ಇಂಗ್ಲಿಷ್​ ಭಾಷೆಯಲ್ಲಿಯೇ ಜನ್ಮ ದಿನಕ್ಕೆ ಶುಭಕೋರಿದ್ದಾರೆ ಅನುಷ್ಕಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net