

ಹೈದರಾಬಾದ್: (Anushka Shetty ) ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಅವರು ಟಾಲಿವುಡ್‌ನಲ್ಲಿ ಸೂಪರ್ ಹಿಟ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಹೆಚ್ಚು ಜನಮನ್ನಣೆ ಪಡೆದುಕೊಂಡಿದ್ದಾರೆ. ಅನುಷ್ಕಾ 40 ವರ್ಷ ದಾಟಿದ ನಂತರವೂ ಮದುವೆಯಾಗದೇ ಒಂಟಿಯಾಗಿದ್ದಾರೆ. ಅನುಷ್ಕಾಗೆ ಹಲವು ಪ್ರೇಮ ಪ್ರಸ್ತಾಪಗಳು ಬಂದಿವೆ.. ಆದರೆ ಅನುಷ್ಕಾಗೆ ಮೊದಲ ಪ್ರೇಮ ಪ್ರಸ್ತಾಪಗಳು ಯಾವಾಗ ಬಂದವು ಎಂದು ನಿಮಗೆ ತಿಳಿದಿದೆಯೇ? ಅನುಷ್ಕಾ ಆರನೇ ತರಗತಿಯಲ್ಲಿದ್ದಾಗ ಪ್ರೇಮ ಪ್ರಸ್ತಾಪಗಳು ಬಂದಿವೆ.. ಅನುಷ್ಕಾ ಸ್ವತಃ ಒಂದು ಸಂದರ್ಶನದಲ್ಲಿ ಈ ಕುರಿತಾಗಿ ಹೇಳಿಕೊಂಡಿದ್ದಾರೆ.
ನಾನು ಆರನೇ ತರಗತಿಯಲ್ಲಿದ್ದಾಗ, ಒಬ್ಬ ಹುಡುಗ ಬಂದು ನನಗೆ ಪ್ರಪೋಸ್ ಮಾಡಿದ. ಅವನು ನನ್ನ ಬಳಿಗೆ ಬಂದು ಐ ಲವ್ ಯೂ ಹೇಳಿದನು.. ಅವನು ನನಗೆ ನೀನು ತುಂಬಾ ಇಷ್ಟ ಎಂದನು. ಆ ಸಮಯದಲ್ಲಿ, ಐ ಲವ್ ಯೂ ಎಂಬುದರ ಅರ್ಥವೇ ನನಗೆ ತಿಳಿದಿರಲಿಲ್ಲ.. ಅವನು ಪ್ರಪೋಸ್ ಮಾಡಿದಾಗ, ನಾನು ಸರಿ ಎಂದು ಹೇಳಿದೆ.. ಅದು ನನ್ನ ಜೀವನದಲ್ಲಿ ಒಂದು ಸುಂದರ ನೆನಪಾಗಿ ಉಳಿಯಿತು ಎಂದು ಅನುಷ್ಕಾ ಹೇಳಿದರು.
ಅನುಷ್ಕಾ ಶೆಟ್ಟಿ ಟಾಲಿವುಡ್‌ನಲ್ಲಿ ಟಾಪ್ ಹೀರೋಯಿನ್. 2005 ರಲ್ಲಿ ಪುರಿ ಜಗನ್ನಾಥ್ ನಿರ್ದೇಶನದ ತೆಲುಗು ಚಿತ್ರ ಸೂಪರ್ ಮೂಲಕ ಅವರು ತಮ್ಮ ಚೊಚ್ಚಲ ಪ್ರವೇಶ ಮಾಡಿದರು. ನಂತರ ರವಿತೇಜ ಅವರೊಂದಿಗೆ ವಿಕ್ರಮಾರ್ಕುಡು ಚಿತ್ರದಲ್ಲಿ ನಟಿಸುವ ಮೂಲಕ ಮನ್ನಣೆ ಗಳಿಸಿದರು.
ವೃತ್ತಿಜೀವನದಲ್ಲಿ ಮಹತ್ವದ ತಿರುವು ಪಡೆದ ಚಿತ್ರ ಅರುಂಧತಿ (2009), ಇದರಲ್ಲಿ ಅವರು ದ್ವಿಪಾತ್ರದಲ್ಲಿ ನಟಿಸಿದರು ಮತ್ತು ಅಪಾರ ಪ್ರಶಂಸೆಯನ್ನು ಪಡೆದರು. ಈ ಚಿತ್ರಕ್ಕಾಗಿ ಅವರು ನಂದಿ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು. ನಂತರ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.