

ಮುಂಬೈ: ಆಧುನಿಕ ಜಗತ್ತಿನಲ್ಲಿ ಮನುಷ್ಯನ ಒತ್ತಡ ನಿವಾರಣೆಗೆ ಯೋಗ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಯೋಗ ಉತ್ತಮ ಜೀವನ ಶೈಲಿಯನ್ನು ರೂಪಿಸುವಲ್ಲಿ ಸಹಕಾರಿಯಾಗಿದೆ ಎಂಬುದನ್ನು ನಿರೂಪಿಸಿದೆ. ವಿಶ್ವ ಯೋಗ ದಿನದ ಅಂಗವಾಗಿ ಬಾಲಿವುಡ್ ನಟಿ ಅನುಷ್ಕಾ ಶರ್ಮ ತಮ್ಮ ಯೋಗಜರ್ನಿಯನ್ನು ಹಂಚಿಕೊಂಡಿದ್ದಾರೆ.
ಬಹುತೇಕ ಸಿನಿಮಾ ಮಂದಿ ಯೋಗದ ಮರೆಯನ್ನು ಹೋಗಿದ್ದಾರೆ. ಒತ್ತಡದಿಂದ ಪಾರಾಗಲು ಇದೊಂದೇ ದಾರಿ ಕೂಡ. ಹಾಗಾಗಿ ಪ್ರತಿದಿನ ಯೋಗಾಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಅಂತಹವರಲ್ಲಿ ಅನುಷ್ಕಾ ಶರ್ಮಾ ಕೂಡ ಒಬ್ಬರು.
ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸಿರುವ ಅನುಷ್ಕಾ ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಯೋಗದ ಮಹತ್ವ ಸಾರಿದ್ದಾರೆ. ಸಂಬಂಧಗಳು ಕೆಲವೊಮ್ಮೆ ಪ್ರಾರಂಭವಾಗುತ್ತದೆ ಮತ್ತು ನಿಲ್ಲುತ್ತದೆ ಆದರೆ ನನ್ನ ಜೀವನದ ಎಲ್ಲಾ ವಯಸ್ಸಿನ ಮತ್ತು ಹಂತಗಳಲ್ಲಿ ಯೋಗ ಜತೆಗಿದೆ. ಪ್ರಾಚೀನ ಮತ್ತು ಸಾಟಿಯಿಲ್ಲದ ರೂಪ ಇದಾಗಿದ್ದು, ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಎಂದೆಂದಿಗೂ ಕೃತಜ್ಞಳಾಗಿರುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಇವರ ಯೋಗ ಪ್ರದರ್ಶನಕ್ಕೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು, ಯೋಗದ ಆಸನಗಳನ್ನು ಇಷ್ಟು ಸುಲಭವಾಗಿ ಪ್ರದರ್ಶಿಸುತ್ತಿರುವ ನೀವು ನಿಜಕ್ಕೂ ಗ್ರೇಟ್ ಎಂದು ಹಾಡಿಹೊಗಳಿದ್ದಾರೆ. (ಏಜೆನ್ಸೀಸ್)