

ಮುಂಬೈ: ಅನುಷ್ಕಾ ಗರ್ಭಿಣಿ ಆದಂದಿನಿಂದ ಗಮನ ಸೆಳೆಯುತ್ತಲೇ ಇದ್ದ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ದಂಪತಿ, ಇದೀಗ ಟಾಕ್ ಆಫ್ ದಿ ನೇಷನ್ ಆಗಿದ್ದಾರೆಂದರೂ ಅತಿಶಯೋಕ್ತಿ ಏನಲ್ಲ. ಏಕೆಂದರೆ ಇವತ್ತಷ್ಟೇ ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ವಿರಾಟ್ ಕೊಹ್ಲಿ ತಂದೆಯಾಗಿದ್ದಾರೆ. ಹೀಗಾಗಿ ಕ್ರಿಕೆಟ್ ಹಾಗೂ ಸಿನಿಮಾರಂಗದ ಅಭಿಮಾನಿಗಳು ಹಲವರು ಅವರ ಬಗ್ಗೆಯೇ ಮಾತನಾಡುತ್ತಿದ್ದಾರೆ.
ಪ್ರಸವವೇದನೆ ಕಾಣಿಸಿಕೊಂಡು ಬೆಳಗ್ಗೆಯಷ್ಟೇ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅನುಷ್ಕಾ ಗರ್ಭಿಣಿ ಆಗಿರುವ ವಿಚಾರವನ್ನು 2020ರ ಆಗಸ್ಟ್ನಲ್ಲಿ ಘೋಷಿಸಿದ್ದರು.
ಅನುಷ್ಕಾ-ವಿರಾಟ್ ದಂಪತಿಯ ಮಗುವನ್ನು ಕರೊನಿಯಲ್ ಎಂದು ಕರೆಯಲಾಗುತ್ತದೆ. ಏಕೆಂದರೆ ಕೋವಿಡ್-10 ಕ್ವಾರಂಟೈನ್ ಅವಧಿಯಲ್ಲಿ ಅವರ ಗರ್ಭಿಣಿಯಾಗಿದ್ದರು. ಅಲ್ಲದೆ ಈ ಕರೊನಾ ಅವಧಿಯಲ್ಲಿ ಗರ್ಭವತಿಯಾಗಿರುವವರು ಜನ್ಮ ನೀಡಿರುವ ಮಕ್ಕಳನ್ನು ಕೋವಿಡ್ ಕಿಡ್ಸ್ ಎಂದೂ ಕರೆಯಲಾಗುತ್ತದೆ.