ಗೋರಕ್ಷಣೆ ಸುಗ್ರೀವಾಜ್ಞೆ ನಾಳೆಯಿಂದ ಜಾರಿ

Govu
Published on

ಬೆಂಗಳೂರು: ಜಾನುವಾರುಗಳ ರಕ್ಷಣೆ ಸಂಬಂಧ ರಾಜ್ಯ ಸರ್ಕಾರ ತಂದಿರುವ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ ಸೋಮವಾರದಿಂದಲೇ ಜಾರಿಗೆ ಬರಲಿದೆ. ಸಚಿವ ಸಂಪುಟ ಒಪ್ಪಿಗೆ ನೀಡಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಇತ್ತೀಚೆಗೆ ಅಂಕಿತ ಹಾಕಿದ್ದರು. ಇದೀಗ ಸುಗ್ರೀವಾಜ್ಞೆ ಜಾರಿಗಾಗಿ ನಿಯಮಾವಳಿಗಳನ್ನು ರೂಪಿಸಲಾಗಿದ್ದು, 15 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಪ್ರಧಾನ ಕಾರ್ಯದರ್ಶಿ, ಪಶು ಸಂಗೋಪನಾ ಸಚಿವಾಲಯ, 4 ನೇ ಮಹಡಿ, ವಿಕಾಸಸೌಧ, ಬೆಂಗಳೂರು ಈ ವಿಳಾಸಕ್ಕೆ ಆಕ್ಷೇಪಣೆಗಳನ್ನು ಕಳುಹಿಸಬಹುದು.

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಸಂರಕ್ಷಣಾ ಅಧ್ಯಾದೇಶ ಇದೇ ಜ.18 ರಿಂದ ಜಾರಿಯಾಗಲಿದೆ. ಗೋ ಹತ್ಯೆ ಹಾಗೂ ಅಕ್ರಮ ಸಾಗಾಟ ಸಂಪೂರ್ಣ ನಿಷೇಧವಾಗುತ್ತದೆ. ರಾಜ್ಯದಲ್ಲಿ ರೈತರು, ಕೃಷಿ ಉದ್ದೇಶಕ್ಕಾಗಿ ಜಾನುವಾರು ಸಾಗಣೆ ಮಾಡುವವರು ಗೊಂದಲಕ್ಕೀಡಾಗಬಾರದು. | ಪ್ರಭು ಚವ್ಹಾಣ್ ಪಶು ಸಂಗೋಪನೆ ಸಚಿವ

ನಿಯಮಾವಳಿಗಳೇನು?

  • ಜಾನುವಾರುಗಳ ಮಾಲೀಕರು ಮಾಲೀಕತ್ವದ ಪ್ರಮಾಣ ಪತ್ರ ಹೊಂದಿರಬೇಕು
  • ಗೋವುಗಳ ಕಿವಿಗೆ ಹಾಕಿಸಿರುವ ಟ್ಯಾಗ್ ನಂಬರ್, ಮಾಲೀಕರ ಆಧಾರ್ ನಂಬರ್ ಜತೆಗೆ ಸ್ವತಃ ಪ್ರಮಾಣೀಕರಿಸಿದ ಪತ್ರ ಹೊಂದಿರಬೇಕು
  • ಜಾನುವಾರು ಸಾಗಣೆಗೂ ಸಂಬಂಧಪಟ್ಟ ಪ್ರಾಧಿಕಾರದಿಂದ ಪ್ರಮಾಣಪತ್ರ ಪಡೆದಿರಬೇಕು. ಇಲ್ಲದಿದ್ದರೆ ನಿಯಮದಲ್ಲಿರುವಂತೆ ಶಿಕ್ಷೆ ನಿಶ್ಚಿತ
  • 6 ತಿಂಗಳ ಗರ್ಭಿಣಿ ಹಸುಗಳನ್ನು ಸಾಗಿಸುವಂತಿಲ್ಲ. ಪಶು ವೈದ್ಯಕೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿಯೂ ಮಾಲೀಕತ್ವ ಪ್ರಮಾಣಪತ್ರ ಇರಬೇಕು
  • ಜಾನುವಾರುಗಳ ಮಾಲೀಕರು ಮಾಲೀಕತ್ವದ ಪ್ರಮಾಣ ಪತ್ರ ಹೊಂದಿರಬೇಕು
  • ಗೋವುಗಳ ಕಿವಿಗೆ ಹಾಕಿಸಿರುವ ಟ್ಯಾಗ್ ನಂಬರ್, ಮಾಲೀಕರ ಆಧಾರ್ ನಂಬರ್ ಜತೆಗೆ ಸ್ವತಃ ಪ್ರಮಾಣೀಕರಿಸಿದ ಪತ್ರ ಹೊಂದಿರಬೇಕು
  • ಜಾನುವಾರು ಸಾಗಣೆಗೂ ಸಂಬಂಧಪಟ್ಟ ಪ್ರಾಧಿಕಾರದಿಂದ ಪ್ರಮಾಣಪತ್ರ ಪಡೆದಿರಬೇಕು. ಇಲ್ಲದಿದ್ದರೆ ನಿಯಮದಲ್ಲಿರುವಂತೆ ಶಿಕ್ಷೆ ನೀಡಲಾಗುತ್ತದೆ.
  • ಕೃಷಿ ಅಥವಾ ಹೈನುಗಾರಿಕೆ ಉದ್ದೇಶಕ್ಕೆ ಸಾಗಣೆ ಮಾಡುವಾಗಲೂ ಸಾಗಣೆ ಪ್ರಮಾಣ ಪತ್ರ ಕಡ್ಡಾಯ.
  • 15 ಕಿಮೀ ಒಳಗೆ ಸಾಗಿಸುವ ಸಂದರ್ಭದಲ್ಲಿ ಸಾಗಣೆ ಹಾಗೂ ಮಾಲೀಕತ್ವ ಪ್ರಮಾಣಪತ್ರ ಕಡ್ಡಾಯ.
  • 6 ತಿಂಗಳ ಗರ್ಭಿಣಿ ಹಸುಗಳನ್ನು ಸಾಗಿಸುವಂತಿಲ್ಲ. ಪಶು ವೈದ್ಯಕೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿಯೂ ಮಾಲೀಕತ್ವ ಪ್ರಮಾಣಪತ್ರ ಇರಬೇಕು.
  • ರಾತ್ರಿ 8 ರಿಂದ ಬೆಳಗ್ಗೆ 6 ಗಂಟೆಯ ತನಕ ಸಾಗಣೆ ಮಾಡುವಂತಿಲ್ಲ.
  • ಬೇಸಿಗೆ ಕಾಲದಲ್ಲಿ ಮಾರ್ಚ್​ನಿಂದ ಮೇವರೆಗೆ ಮಧ್ಯಾಹ್ನ 11 ರಿಂದ 3 ಗಂಟೆಯ ತನಕ ಸಾಗಣೆ ಮಾಡುವಂತಿಲ್ಲ.
  • ವಾಹನದಲ್ಲಿ ಜಾನುವಾರುಗಳು ಎಷ್ಟಿರಬೇಕು ಎಂಬುದನ್ನೂ ನಿಗದಿಪಡಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net