ಬಾಲರಿಗೆ ಬೇಡ ದುಡಿಮೆಯ ಭಾರ; ದೇಶಾದ್ಯಂತ ಇದ್ದಾರೆ 1 ಕೋಟಿಗೂ ಅಧಿಕ ಬಾಲಕಾರ್ವಿುಕರು..

Anti Child Labour
Published on

| ಅವಿನಾಶ ಮೂಡಂಬಿಕಾನ ಬೆಂಗಳೂರು

ಹದಿನಾಲ್ಕು ವರ್ಷದ ಒಳಗಿನ ಮಕ್ಕಳಿಂದ ದುಡಿಮೆ ಮಾಡಿಸಿಕೊಳ್ಳುವುದು ಅಪರಾಧ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕಾನೂನುಗಳನ್ನು ಜಾರಿಗೆ ತಂದಿದ್ದರೂ, ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಂಡರೂ ಬಾಲ ಕಾರ್ವಿುಕ ಪದ್ಧತಿ ನಿಮೂಲನೆ ಮಾಡುವಲ್ಲಿ ಯಶಸ್ಸು ಕಂಡಿಲ್ಲ. ಬಾಲ್ಯದಲ್ಲಿ ತುಂಟಾಟವಾಡುತ್ತಾ ಬೆಳೆಯಬೇಕಾದ ಮಕ್ಕಳ ಬದುಕು ದುಡಿಮೆ ಯಲ್ಲೇ ಕಮರುತ್ತಿದೆ. ಕಾರ್ಖಾನೆ, ಗ್ಯಾರೇಜ್, ಹೋಟೆಲ್, ಬೇಕರಿ, ಬೀಡಾ ಅಂಗಡಿ, ಬಟ್ಟೆ ಅಂಗಡಿ, ಕಟ್ಟಡ ಕೆಲಸ, ಕೂಲಿ ಕೆಲಸ, ಸಿನಿಮಾ ನಿರ್ಮಾಣ ಸೇರಿ ನೂರಾರು ಕಡೆ ಲಕ್ಷಾಂತರ ಬಾಲ ಕಾರ್ವಿುಕರು ಕೆಲಸ ಮಾಡುತ್ತಿದ್ದಾರೆ. ತಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯಕ್ಕೆ ಕಷ್ಟವಾಗುವ ಕೆಲಸಗಳನ್ನು ಮಕ್ಕಳು ಮಾಡುವಂತಾಗಿದೆ. 5 ವರ್ಷದಲ್ಲಿ ರಾಜ್ಯದಲ್ಲಿ 375 ಬಾಲ ಕಾರ್ವಿುಕ ರನ್ನು ಪತ್ತೆ ಹಚ್ಚಲಾಗಿದೆ. ಇನ್ನು ಕಳೆದ ನಾಲ್ಕು ತಿಂಗಳಿನಲ್ಲಿ ಕರ್ನಾಟಕದ ವಿವಿಧ ಠಾಣೆಗಳಲ್ಲಿ 33 ಬಾಲ ಕಾರ್ವಿುಕರನ್ನು ಪತ್ತೆ ಹಚ್ಚಲಾಗಿದೆ. ರಾಜ್ಯದಲ್ಲಿ ಲಕ್ಷಾಂತರ ಬಾಲ ಕಾರ್ವಿುಕರಿದ್ದರೂ, ಪತ್ತೆಯಾಗುವವರ ಸಂಖ್ಯೆ ಬಹಳ ವಿರಳ. ದೇಶದಲ್ಲಿ 45 ಲಕ್ಷ ಬಾಲಕಿಯರು ಹಾಗೂ 56 ಲಕ್ಷ ಬಾಲಕರು ಸೇರಿ 1.1 ಕೋಟಿ ಬಾಲ ಕಾರ್ವಿುಕರಿದ್ದಾರೆ ಎಂದು ಅಂದಾಜಿಸಲಾಗಿದೆ.

ಈ ರಾಜ್ಯಗಳಲ್ಲಿ ಜಾಸ್ತಿ!: ಕರ್ನಾಟಕ, ಉತ್ತರ ಪ್ರದೇಶ, ರಾಜಸ್ತಾನ, ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಲ ಕಾರ್ವಿುಕರಿದ್ದಾರೆ. ಭಾರತ, ದಕ್ಷಿಣ ಆಫ್ರಿಕಾ, ಕೀನ್ಯಾ ಸೇರಿ ಹಲವಾರು ದೇಶಗಳಲ್ಲಿ ಪ್ರಪಂಚದ 21.7 ಕೋಟಿ ಬಾಲ ಕಾರ್ವಿುಕರಿದ್ದಾರೆ ಎಂಬುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಇದರಲ್ಲಿ ಅನೇಕ ಮಕ್ಕಳು ಸೂಕ್ತ ಪೋಷಕಾಂಶಯುಕ್ತ ಆಹಾರ ಸೇವನೆಯಿಂದ ವಂಚಿತರಾಗಿದ್ದಾರೆ.

ಕಾನೂನು ಏನು ಹೇಳುತ್ತೆ?: ದೇಶದಲ್ಲಿ ಬಾಲ ಕಾರ್ವಿುಕ ಪದ್ದತಿ ನಿಷೇಧಿಸಲಾಗಿದ್ದು, 14 ವರ್ಷದೊಳಗಿನ ಮಕ್ಕಳನ್ನು ಬಾಲ ಕಾರ್ವಿುಕರು ಎಂದು ಘೊಷಿಸಲಾಗಿದೆ. ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧವಾಗಿದೆ. ಇಂತಹ ವ್ಯವಸ್ಥೆಯನ್ನು ತಡೆಯಲು ಹಾಗೂ ಅಗತ್ಯ ರೀತಿಯಲ್ಲಿ ಜಾಗೃತಿ ಮೂಡಿಸಲು ವಿಶ್ವ ಕಾರ್ವಿುಕ ಸಂಘಟನೆಯು 2002ರಿಂದ ವಿಶ್ವದ ಎಲ್ಲೆಡೆ ಶ್ರಮಿಸುತ್ತಿರುವ ಬಾಲ ಕಾರ್ವಿುಕರ ರಕ್ಷಣೆಗಾಗಿ ಜಗತ್ತಿನ ಗಮನ ಸೆಳೆಯುವ ಉದ್ದೇಶದಿಂದ ಜೂನ್ 12 ರಂದು ‘ಬಾಲ ಕಾರ್ವಿುಕ ವಿರೋಧಿ ದಿನ’ ಆಚರಣೆಗೆ ಘೊಷಿಸಿದೆ. ಬಾಲಕಾರ್ವಿುಕರಾಗಿ ದುಡಿಯುತ್ತಿರುವ ಮಕ್ಕಳು ಈ ದುಷ್ಟ ವ್ಯವಸ್ಥೆಯಿಂದ ಹೊರಬಂದು ತಮ್ಮ ಹಕ್ಕುಗಳ ಕುರಿತು ಜಾಗೃತಿ ಹೊಂದಿ, ದೇಶದ ಉತ್ತಮ ನಾಗರಿಕರಾಗಲಿ ಎಂಬುದೇ ಇದರ ಉದ್ದೇಶವಾಗಿದೆ.

ಅಪರಾಧಕ್ಕೆ ಶಿಕ್ಷೆ ಏನು?: 1948ರಲ್ಲಿ ಬಾಲಕಾರ್ವಿುಕ ವಿರೋಧಿ ಕಾನೂನು ಜಾರಿಗೆ ತರಲಾಯಿತು. 14 ವರ್ಷದ ಒಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧ(ಕ್ರೖೆಂ) ಎಂದು ಪರಿಗಣಿಸಿ, ಕಾನೂನಿನಲ್ಲಿದ್ದ ಕೆಲ ಅಂಶಗಳನ್ನು ತಿದ್ದುಪಡಿ ಮಾಡಲಾಗಿದೆ. ಆದರೆ, ಈ ಕಾನೂನು ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ಬಂದಿದೆ ಎಂಬುದು ಪ್ರಶ್ನೆಯಾಗಿ ಉಳಿದಿದೆ. ಬಾಲ ಕಾರ್ವಿುಕರನ್ನು ದುಡಿಸಿಕೊಳ್ಳುತ್ತಿರುವುದು ಸಾಬೀತಾದರೆ ದುಡಿಸಿಕೊಂಡ ಸಂಸ್ಥೆಯ ಮಾಲಿಕರಿಗೆ 3ರಿಂದ 6 ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 10ರಿಂದ 20 ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತದೆ.

ಎನ್​ಜಿಒಗಳಿಂದ ಮಕ್ಕಳ ರಕ್ಷಣೆ: ಬಾಲ ಕಾರ್ವಿುಕರನ್ನು ರಕ್ಷಿಸಲೆಂದೇ ರಾಜ್ಯದಲ್ಲಿ ಸಾಕಷ್ಟು ಸರ್ಕಾರೇತರ ಸೇವಾ ಸಂಸ್ಥೆ (ಎನ್​ಜಿಒ) ಗಳು ಹುಟ್ಟಿಕೊಂಡಿವೆ. ಈ ಎನ್​ಜಿಒಗಳು ಸ್ವಯಂ ವಸತಿ ಶಾಲೆ ಆರಂಭಿಸಿ ಬಾಲ ಕಾರ್ವಿುಕರಿಗೆ ಉಚಿತ ಊಟ, ವಸತಿ, ಶಿಕ್ಷಣ ಪೂರೈಸುತ್ತಿವೆ. ರಾಜ್ಯದ ಕೆಲ ಹಳ್ಳಿಗಳಲ್ಲಿ ಬಡತನದಿಂದ ಜೀವನ ನಿರ್ವಹಣೆ ಮಾಡಕಲಾಗದೆ, ಕೆಲ ಬಾಲಕರು ಕೆಲಸ ಅರಸಿಕೊಂಡು ನಗರಕ್ಕೆ ಬರುತ್ತಾರೆ. ಮಕ್ಕಳು ಕಡಿಮೆ ವೇತನಕ್ಕೆ ದುಡಿವ ಹಿನ್ನೆಲೆಯಲ್ಲಿ ಸಣ್ಣ-ಪುಟ್ಟ ಕೆಲಸಕ್ಕೆ ಇಟ್ಟುಕೊಳ್ಳಲು ಹೋಟೆಲ್, ಕಾರ್ಖಾನೆ, ಬೀಡಾ ಅಂಗಡಿ ಮಾಲೀಕರು ಹಿಂದೆ-ಮುಂದೆ ನೋಡುವುದಿಲ್ಲ ಎಂದು ಕಾರ್ವಿುಕ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net