ಅಂತರಗಟ್ಟೆ ಉತ್ಸವಮೂರ್ತಿ ಓಲೆ ನಾಪತ್ತೆ

devi crime
ವಜ್ರದ ಬೆಂಡೋಲೆ ಇಲ್ಲದ ಉತ್ಸವ ಮೂರ್ತಿ.
Published on

ಅಜ್ಜಂಪುರ: ಸುತ್ತಮುತ್ತಲಿನ ನಾಲ್ಕು ಜಿಲ್ಲೆಗಳ ಆರಾಧ್ಯ ದೇವತೆ ಅಂತರಗಟ್ಟೆ ಉತ್ಸವಮೂರ್ತಿ ದುರ್ಗಾಂಬ ದೇವಿಯ ವಜ್ರದೋಲೆ ನಾಪತ್ತೆಯಾಗಿದೆ.

ಒಂದೂವರೆ ತಿಂಗಳ ಹಿಂದೆ ಅಂತರಗಟ್ಟೆ ಗ್ರಾಮಸ್ಥರು ಯಗಟಿಪುರದ ವೇದಾ ನದಿಯಲ್ಲಿ ಉತ್ಸವ ಮೂರ್ತಿಯನ್ನು ಸ್ವಚ್ಛಗೊಳಿಸುವಾಗ ಒಂದು ಕಿವಿಯ ವಜ್ರದ ಬೆಂಡೋಲೆ ನಾಪತ್ತೆಯಾಗಿರುವುದು ಗ್ರಾಮಸ್ಥರ ಗಮನಕ್ಕೆ ಬಂದಿದೆ. ಈ ಬಗ್ಗೆ ದೇವಾಲಯದ ಅರ್ಚಕರು, ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುವವರಿಗೆ ತಿಳಿಸಿದ್ದರು. ದೇವಾಲಯಕ್ಕೆ ಸಂಬಂಧಪಟ್ಟ ಏಳು ಹಳ್ಳಿ ಗ್ರಾಮಸ್ಥರು ಮತ್ತು ಸ್ಥಳೀಯ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ನಾಪತ್ತೆಯಾದ ಒಡವೆಗಳನ್ನು ತಯಾರಿಸಿ ಮತ್ತೆ ವಿಧಿ ವಿಧಾನಗಳನ್ನು ನಡೆಸದೇ ದೇವರ ಉತ್ಸವ ಮೂರ್ತಿಗೆ ಅಳವಡಿಸಲು ಯತ್ನಿಸಿರುವುದಕ್ಕೆ ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಯಗಟಿ ಹೊಳೆಗೆ ದೇವತೆಯನ್ನು ಕರೆದೊಯ್ಯಲು ನಿಬಂಧನೆ ಪ್ರಕಾರ ನೀಡಲಾಗಿದೆ. ಪುಣ್ಯಸ್ನಾನ ಮಾಡಿಸುವಾಗ ಓಲೆ ನಾಪತ್ತೆಯಾಗಿರುವುದನ್ನು ನನ್ನ ಗಮನಕ್ಕೆ ಬಂದಿದೆ. ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ನಾಪತ್ತೆಯಾಗಿರುವುದು ಬಂಗಾರದ ಓಲೆ ಎಂದು ಗ್ರಾಮ ಸಹಾಯಕಿ ಗೀತಮ್ಮ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net