

ದೇಶಾದ್ಯಂತ ಗಣೇಶ ಹಬ್ಬದ ಆಚರಣೆ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿದೆ. ಅದೆಷ್ಟೋ ಜನರು ಮಣ್ಣಿನ ಗಣಪನನ್ನು ಮನೆಯಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.
ಆದರೆ ಈ ಮಧ್ಯೆ ಮಹಿಳೆಯ ಮನೆಗೆ ಗಣಪತಿ ವಿಭಿನ್ನವಾಗಿ ಬಂದಿದ್ದಾನೆ. ಹಬ್ಬಕ್ಕಾಗಿ ತರಕಾರಿಗಳನ್ನು ತಂದ ಮಹಿಳೆಗೆ ಅಚ್ಚರಿ ಕಾದಿತ್ತು. ಒಂದು ಗಣಪತಿ ಮೂರ್ತಿಯ ಆಕಾರದ ಹಸಿಮೆಣಸೂ ಇತ್ತು. ಅದನ್ನು ನೋಡಿದ ಮಹಿಳೆ ಮತ್ತವರ ಕುಟುಂಬದವರು ಸಿಕ್ಕಾಪಟೆ ಅಚ್ಚರಿಗೆ ಒಳಗಾಗಿದ್ದಾರೆ.
ಅನುಭಾ ಎಂಬ ಟ್ವಿಟರ್ ಬಳಕೆದಾರರೋರ್ವರು ಫೋಟೋವನ್ನೂ ಪೋಸ್ಟ್ ಮಾಡಿದ್ದಾರೆ. ಈ ಹಸಿ ಮೆಣಸು ಗಣಪತಿಯ ಮುಖದ ಭಾಗವನ್ನು ತುಂಬ ಹೋಲುವುದನ್ನು ನೀವೂ ಗಮನಿಸಬಹುದು. (ಏಜೆನ್ಸೀಸ್)