

ಕಲಬುರಗಿ: ಜಿಲ್ಲೆಯಲ್ಲಿ ಇನ್ನೋರ್ವರಿಗೆ ಕರೊನಾ ವೈರಸ್ ತಗುಲಿದ್ದು ದೃಢಪಟ್ಟಿದೆ.
ಕರೊನಾ ವೈರಸ್ನಿಂದ ಮೃತಪಟ್ಟ ವೃದ್ಧನ ಕುಟುಂಬದ ನಾಲ್ವರನ್ನು ಪ್ರತ್ಯೇಕ ವಾರ್ಡ್ನಲ್ಲಿ ಇಟ್ಟು ತಪಾಸಣೆ ಮಾಡಲಾಗಿತ್ತು. ಅದರಲ್ಲಿ ಮೂವರಿಗೆ ಕರೊನಾ ಇಲ್ಲದೆ ಇರುವುದು ಶನಿವಾರ ದೃಢಪಟ್ಟಿತ್ತು. ಆದರೆ ಇನ್ನೋರ್ವರ ವೈದ್ಯಕೀಯ ವರದಿ ಬಂದಿರಲಿಲ್ಲ.
ಈಗ ಆ ನಾಲ್ಕನೇಯವರ ವರದಿ ಕರೊನಾ ಪಾಸಿಟಿವ್ ಬಂದಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಹೇಳಿದ್ದಾರೆ.