ಶ್ರೀನಿವಾಸ್​ ಗೌಡಗಿಂತ ಫಾಸ್ಟ್​ ಆಗಿ ಓಡ್ತಾನೆ ನಿಶಾಂತ್​ ಶೆಟ್ಟಿ: ಕಾರ್ಕಳದಲ್ಲೀಗ ಮತ್ತೊಬ್ಬ ಉಸೇನ್​ ಬೋಲ್ಟ್​

nishanth
Published on

ಕಾರ್ಕಳ: ಕಂಬಳ ಕ್ರೀಡೆಯಲ್ಲಿ ಉಸೇನ್​ ಬೋಲ್ಟ್​ಗಿಂತ ವೇಗವಾಗಿ ಶ್ರೀನಿವಾಸ್​ ಗೌಡ ಓಡಿ ಸುದ್ದಿಯಲ್ಲಿದ್ದರು. ಆದರೆ ಶ್ರೀನಿವಾಸ್​ ಗೌಡಗಿಂತ ವೇಗವಾಗಿ ಓಡುವ ಮತ್ತೊಬ್ಬ ಉಸೇನ್​ ಬೋಲ್ಟ್​ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಬಜಗೋಳಿಯ ನಿಶಾಂತ್​ ಶೆಟ್ಟಿ ಕಂಬಳ ಕ್ರೀಡೆಯಲ್ಲಿ 143 ಮೀಟರ್​ ಓಡಲು ತೆಗೆದುಕೊಂಡಿದ್ದು ಕೇವಲ 13.61 ಸೆಕೆಂಡ್​. ವೇಣೂರಿನಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ 143 ಮೀಟರ್​ ದೂರವನ್ನು ಕೇವಲ 13.61 ಸೆಕೆಂಡ್​ನಲ್ಲಿ ನಿಶಾಂತ್​ ಓಡಿದ್ದಾರೆ. ಇದೇ ದೂರವನ್ನು ಓಡಲು ಶ್ರೀನಿವಾಸ್​ ಶೆಟ್ಟಿ 13.62 ಸೆಕೆಂಡ್​ನಲ್ಲಿ ಓಡಿದ್ದರು. ಆದರೆ ಇದೀಗ ನಿಶಾಂತ್​ ಶ್ರೀನಿವಾಸ್​ಗಿಂತ 0.01 ಸೆಕೆಂಡ್​ ವೇಗವಾಗಿ ಓಡಿದ್ದಾರೆ.

ಶ್ರೀನಿವಾಸ್​ ಗೌಡರ ವೇಗವನ್ನು ನೋಡಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅವರನ್ನು ಗುರುತಿಸಿತ್ತು. ನಿನ್ನೆ (ಫೆ.17) ಬೆಂಗಳೂರಿನಲ್ಲಿ ಶ್ರೀನಿವಾಸ್​ ಗೌಡ ಅವರಿಗೆ ರಾಜ್ಯದ ಮುಖ್ಯಮಂತ್ರಿ ಸನ್ಮಾನ ಮಾಡಿದ್ದರು. ಇದೀಗ ಶ್ರೀನಿವಾಸ್​ ಗೌಡನ ದಾಖಲೆಯನ್ನು ನಿಶಾಂತ್​ ಶೆಟ್ಟಿ ಮುರಿದಿದ್ದು ಅವರಿಗೆ ಯಾವ ರೀತಿಯಲ್ಲಿ ಸ್ಪಂದನೆ ಸಿಗುತ್ತದೆ ಎನ್ನುವುದನ್ನು ಕಾದು ನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net