ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ನಟಿಗೆ ಮತ್ತೊಂದು ಭಯಾನಕ ಕಾಯಿಲೆ! ಏನನ್ನೂ ತಿನ್ನಲು ಸಾಧ್ಯವಾಗುತ್ತಿಲ್ಲವೆಂದು ಕಣ್ಣೀರಿಟ್ಟ ನಟಿ

hina kahan
Published on

ಮುಂಬೈ:  ಕಿರುತೆರೆ ನಟಿ ಹಿನಾ ಖಾನ್ ಸ್ತನ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.  ಸದ್ಯ ಕಿಮೊಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ತಮ್ಮ ಚಿಕಿತ್ಸೆ ಮತ್ತು ಆರೋಗ್ಯದ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ನಿಯಮಿತವಾಗಿ ತಮ್ಮ ಅಭಿಮಾನಿಗಳಿಗೆ ನವೀಕರಣಗಳನ್ನು ನೀಡುತ್ತಿದ್ದಾರೆ. ಇದೀವ ಅವರು ತಮ್ಮ ಆರೋಗ್ಯದ ಕುರಿತಾಗಿ ಮತ್ತೊಂದು ಮಾಹಿತಿ ಹಂಚಿಕೊಂಡಿದ್ದಾರೆ.

ಹಿನಾ ವಿಶೇಷ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ತನಗೆ ಮತ್ತೊಂದು ಕಾಯಿಲೆ ಇರುವುದು ಪತ್ತೆಯಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಕಿಮೋಥೆರಪಿ ಅಡ್ಡ ಪರಿಣಾಮಗಳಿಂದ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂದು ಭಾವುಕರಾಗಿದ್ದಾರೆ. ಕೀಮೋಥೆರಪಿ ಅಡ್ಡ ಪರಿಣಾಮಗಳಿಂದಾಗಿ ಹಿನಾ ಖಾನಾ ಮ್ಯೂಕೋಸಿಟಿಸ್‌ನಿಂದ ಬಳಲುತ್ತಿದ್ದಾರೆ.

'ಒಂದೆಡೆ ಕೀಮೋಥೆರಪಿ.. ಇನ್ನೊಂದೆಡೆ ಮ್ಯೂಕೋಸಿಟಿಸ್. ಇದಕ್ಕೆ ಚಿಕಿತ್ಸೆಯಾಗಿ ವೈದ್ಯರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಆದರೆ ನಿಮ್ಮಲ್ಲಿ ಯಾರಾದರೂ ಈ ರೋಗವನ್ನು ಎದುರಿಸಿದ್ದರೆ, ಪರಿಣಾಮಕಾರಿ ಔಷಧಗಳು ಮತ್ತು ಸಲಹೆಗಳನ್ನು ನನಗೆ ತಿಳಿಸಿ. ಇದು ನನಗೆ ತುಂಬಾ ನೋವಿನ ಪ್ರಯಾಣವಾಗಿತ್ತು.  ಏನನ್ನೂ ತಿನ್ನಲು ಸಾಧ್ಯವಾಗುತ್ತಿಲ್ಲ' ಎಂದು ಹಿನಾ ಖಾನ್ ಹೇಳಿದರು.

ಹೀನಾ ಖಾನ್ ಅವರ ಪೋಸ್ಟ್ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಕೆ ಶೀಘ್ರ ಗುಣಮುಖರಾಗಲಿ ಎಂದು ಅನೇಕ ನೆಟ್ಟಿಗರು ಪ್ರಾರ್ಥಿಸುತ್ತಿದ್ದಾರೆ. ಇದೇ ವೇಳೆ, ‘ಸರಿಯಾದ ಚಿಕಿತ್ಸೆ ಪಡೆಯಿರಿ... ತಪ್ಪು ಸಲಹೆಯಿಂದ ಪರಿಸ್ಥಿತಿ ಹದಗೆಡುತ್ತದೆ’ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net