

ಹೈದರಾಬಾದ್: ಮಾಸ್ ಮ್ಯಾನ್ ಎನ್ಟಿಆರ್ ಮತ್ತು ಜಾನ್ವಿ ಕಪೂರ್ ಅಭಿನಯದ ಕೊರಟಾಲ ಶಿವ ನಿರ್ದೇಶನದ ದೇವರ ಸಿನಿಮಾ ಈಗಾಗಲೇ ಸಾಕಷ್ಟು ಹೈಪ್ ಕ್ರಿಯೆಟ್ ಮಾಡಿದೆ. ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ಕಾತರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಚಿತ್ರದ ಹಾಡುಗಳು ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ. ಇದೀಗ ಸಿನಿಮಾ ಎರಡನೇ ಹಾಡು ಐದು ಭಾಷೆಗಳಲ್ಲಿ ರಿಲೀಸ್ ಆಗಿದೆ.
ತೆಲುಗಿನಲ್ಲಿ ಚುಟ್ಟಮಲ್ಲೆ, ಹಿಂದಿಯಲ್ಲಿ ಧೀರೆ ಧೀರೆ, ತಮಿಳಿನಲ್ಲಿ ಪತ್ತವೈಕ್ಕುಂ, ಕನ್ನಡದಲ್ಲಿ ಸ್ವಾತಿಮುತ್ತೆ ಸಿಕ್ಕಂಗೈತೆ ಮತ್ತು ಮಲಯಾಳಂನಲ್ಲಿ ಕನ್ನಿನಾಥನ್ ಕಾಮನೋತ್ತಂ ಎಂಬ ಸಾಹಿತ್ಯದೊಂದಿಗೆ ಆರಂಭವಾಗುವ ಈ ರೊಮ್ಯಾಂಟಿಕ್ ಹಾಡಿಗೆ ಅನಿರುದ್ಧ್ ರವಿಚಂದರ್ ಧ್ವನಿ ನೀಡಿದ್ದಾರೆ. ಶಿಲ್ಪಾ ರಾವ್ ಅವರ ಗಾಯನದೊಂದಿಗೆ ಬಾಸ್ಕೊ ಮಾರ್ಟಿಸ್ ನೃತ್ಯ ಸಂಯೋಜನೆ ಇದೆ.
3 ನಿಮಿಷ 44 ಸೆಕೆಂಡ್ಗಳ ಈ ಹಾಡಿಗೆ ಫ್ಯಾನ್ಸ್ ಫಿದಾ ಆಗಿದ್ದು, ಎಲ್ಲರೂ ಈ ಹಾಡು ಡ್ಯುಯೆಟ್ ಆಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನನಗೆ ಎನ್ಟಿಆರ್ ಹಾಗೂ ಶ್ರೀದೇವಿ ಅವರ ನೆನಪು ಬರುತ್ತಿದೆ, ಜಾನ್ವಿ ಜೂನಿಯರ್ ಶ್ರೀದೇವಿ, ಸಿನಿಮಾ ನೋಡಲು ಕಾಯುತ್ತಿದ್ದೇನೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ದೇವರ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಇದು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ದೇವರ-1 ಸೆಪ್ಟೆಂಬರ್ನಲ್ಲಿ ತೆರೆಕಾಣಲಿದೆ. (ಏಜೆನ್ಸೀಸ್)