ಕರ್ನಾಟಕದಲ್ಲಿ ಮತ್ತೊಂದು ಪ್ರಾದೇಶಿಕ ಪಕ್ಷ;  ಸಿ.ಎಂ.ಇಬ್ರಾಹಿಂ ಸುಳಿವು|regional party

C M Ibrahim
Published on

ಬೆಂಗಳೂರು: ಕರ್ನಾಟಕದಲ್ಲಿ ಮತ್ತೊಂದು ಪ್ರಾದೇಶಿಕ ಪಕ್ಷ ಸ್ಥಾಪನೆಯಾಗಲಿದೆ(Another regional party in Karnataka) . ಹೌದು, ಈಗಾಗಲೇ ಅದಕ್ಕೆ ಪೂರ್ವ ತಯಾರಿ ನಡೆದಿದೆ. ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ(CM Ibrahim)ಈ ಬಗ್ಗೆ ಸುಳಿವು ನೀಡಿದ್ದಾರೆ.

ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಾದೇಶಿಕ ಪಕ್ಷ ಸ್ಥಾಪನೆಗೆ ಹೊರಟಿದ್ದೇವೆ. ಕೋಡಿಹಳ್ಳಿ ಚಂದ್ರಶೇಖರ, ಮಾರಸಂದ್ರ ಮುನಿಯಪ್ಪ ಎಲ್ಲರೂ ರಾಜ್ಯ ಪ್ರವಾಸ ಮಾಡುತ್ತಿದ್ದೇವೆ. ಎರಡು ತಿಂಗಳಲ್ಲಿ ಹೊಸ ಪಕ್ಷ ಘೋಷಿಸುತ್ತೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಜೆಡಿಎಸ್ ಭವಿಷ್ಯ ಕಷ್ಟ. ಜೆಡಿಎಸ್‌ಗೆ ಬಿಜೆಪಿ ಭಾರವಾಗಿದೆ, ಬಿಜೆಪಿಯವರಿಗೆ ಜೆಡಿಎಸ್ ಭಾರವಾಗಿದೆ. ಅವರಿಗೆ ಮನಸ್ಸು ಇಲ್ಲವೇ ಇಲ್ಲ. ಜೆಡಿಎಸ್ ಸೆಕ್ಯೂಲರ್ ಪಾರ್ಟಿಯಾಗಿಲ್ಲ. ಈ ಹಿಂದೆ ಜೆಡಿಎಸ್ ಗೆದ್ದ ಕಡೆ ಮುಸ್ಲಿಂ ವೋಟು ಕೊಟ್ಟಿದ್ದರು. ಈಗ ಹಾಗಿಲ್ಲ ಎಂದರು.

ಟೆರರ್ ಅಟ್ಯಾಕ್ ಬಗ್ಗೆ ಮಾತನಾಡುತ್ತಿಲ್ಲ. ಹಿಂದೂ-ಮುಸ್ಲಿಂ ಅಂತ ತಂದಿಡುತ್ತಿದ್ದಾರೆ.

ನಾವೆಲ್ಲರೂ ಭಾರತೀಯರು. ಬಿಜೆಪಿ ಬಂದಾಗ ಹಿಂದೂ ಧರ್ಮ ವಿಪತ್ತಿಗೆ ಬಂದಿದೆ. ಇದೆಲ್ಲವನ್ನೂ ಬಿಟ್ಟುಬಿಡಿ. ಅಕ್ಕಿ , ಗೋದಿ, ಉದ್ಯೋಗದ ಬಗ್ಗೆ ಮಾತನಾಡಿ. ಈ ದೇಶ ಸರ್ವಧರ್ಮ ಸಮನ್ವಯದ ನಾಡು. ಇದು ವಸುಧೈವ ಕುಟುಂಬದ ನಾಡು. ಇಲ್ಲಿ ಯಾಕೆ ಗೊಂದಲ ಸೃಷ್ಟಿ ಮಾಡುತ್ತೀರಿ ಎಂದು ಸಿ.ಎಂ.ಇಬ್ರಾಹಿಂ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net