

ಹೈದರಾಬಾದ್: ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ 'ಕಲ್ಕಿ' ಸಿನಿಮಾ ಈಗಾಗಲೇ ಹಲವು ದಾಖಲೆ ಬರೆದಿದೆ. ಬಿಡುಗಡೆಯಾಗಿ 40 ದಿನದ ನಂತರ ಈ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ಮತ್ತೊಂದು ಅಪರೂಪದ ದಾಖಲೆ ನಿರ್ಮಿಸಿದೆ.
ಕಲ್ಕಿ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೇಲಾಗಿ ಮೊದಲ ದಿನ ಸುಮಾರು ರೂ. 200 ಕೋಟಿ ಗ್ರಾಸ್ ಕಲೆಕ್ಷನ್ಸ್ ಸಂಚಲನ ಮೂಡಿಸಿದೆ. ಬಾಹುಬಲಿ ನಂತರ 'ಕಲ್ಕಿ' ಸಿನಿಮಾ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಸಿನಿಮಾ ಎಂಬ ದಾಖಲೆ ಬರೆದಿದೆ. ಇಲ್ಲಿಯವರೆಗೆ ಈ ಚಿತ್ರ ರೂ. 1300 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಇನ್ನು ಶಾರುಖ್ ಅಭಿನಯದ 'ಜವಾನ್' ಚಿತ್ರದ ದಾಖಲೆಯನ್ನು ಈ ಸಿನಿಮಾ ಮುರಿದಿದೆ ಎಂಬುದು ಲೇಟೆಸ್ಟ್ ಅಪ್ಡೇಟ್. ಜವಾನ್ 760 ಕೋಟಿ ರೂ. ಒಟ್ಟು ಕಲೆಕ್ಷನ್ ಮಾಡಿದೆ. ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲಿ ಈ ಚಿತ್ರ ಒಟ್ಟು 760 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಆಗಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲ, 'ಬಾಹುಬಲಿ 2' ಕೆಜಿಎಫ್ 2, 'ಆರ್ಆರ್ಆರ್' ನಂತರ 'ಕಲ್ಕಿ' ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆ ಸೃಷ್ಟಿಸಿದೆ.
ಇದಲ್ಲದೆ, ಈ ಚಿತ್ರವು 40 ನೇ ದಿನದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಇತ್ತೀಚೆಗೆ ಈ ಚಿತ್ರದ ಟಿಕೆಟ್ ದರವನ್ನು ರೂ. 100ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಈ ಹಿಂದೆ ಸಿನಿಮಾ ನೋಡಲು ಸಾಧ್ಯವಾಗದ ಪ್ರೇಕ್ಷಕರು ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಖುಷಿ ಪಡುತ್ತಿದ್ದಾರೆ. ಸೋಮವಾರ ಈ ಸಿನಿಮಾದ ಬುಕ್ ಮೈ ಶೋನಲ್ಲಿ 10,000ಕ್ಕೂ ಹೆಚ್ಚು ಟಿಕೆಟ್‌ಗಳು ಬುಕ್ ಆಗಿವೆ. ಮಂಗಳವಾರವೂ ಈ ಸಿನಿಮಾದ ಬುಕ್ ಮೈ ಶೋನಲ್ಲಿ ಸುಮಾರು 8 ಸಾವಿರ ಟಿಕೆಟ್ ಮಾರಾಟವಾಗಿದೆ ಎಂದು ಬುಕ್ ಮೈ ಶೋ ಹೇಳಿದೆ.
ಈ ವಾರವೂ ದೊಡ್ಡ ಸಿನಿಮಾಗಳ ಅಬ್ಬರವಿಲ್ಲದ ಕಾರಣ 'ಕಲ್ಕಿ' ಆ.15 ರವರೆಗೆ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿದೆ ಎಂದು ಸಿನಿ ಇಂಡಸ್ಟ್ರಿ ಮಂದಿ ಹೇಳುತ್ತಿದ್ದಾರೆ.