VIDEO| ಬೆಂಗಳೂರಲ್ಲಿ ಮತ್ತೊಮ್ಮೆ ಪಾಕ್​ ಪರ ಘೋಷಣೆ? ಟೌನ್​ಹಾಲ್​ ಬಳಿ ಯುವತಿಯನ್ನು ವಶಕ್ಕೆ ಪಡೆದು ಗೌಪ್ಯ ಸ್ಥಳಕ್ಕೆ ಕರೆದೊಯ್ದ ಪೊಲೀಸರು

townhall
Published on

ಬೆಂಗಳೂರು: ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಪಾಕಿಸ್ತಾನ್​ ಜಿಂದಾಬಾದ್​ ಘೋಷಣೆ ಮೊಳಗಿ ಒಂದು ದಿನದೊಳಗೆ ನಗರದಲ್ಲಿ ಮತ್ತೊಂದು ಪಾಕ್​ ಕ್ರಿಮಿ ಪತ್ತೆಯಾಗಿದೆ.

ನಿನ್ನೆ ಪಾಕಿಸ್ತಾನ್​ ಜಿಂದಾಬಾದ್​ ಎಂದು ಕೂಗಿದ್ದ ಅಮೂಲ್ಯಾಳನ್ನು ಇಂದು ಪೊಲೀಸರು ನ್ಯಾಯಾಂಗ ಬಂಧನಕ್ಕೆ ತಳ್ಳಿದ್ದಾರೆ. ದೇಶದ್ರೋಹಿ ಅಮೂಲ್ಯಾಗೆ ಕಠಿಣ ಶಿಕ್ಷೆಯಾಗಬೇಕು ಎಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಅದೇ ರೀತಿಯಲ್ಲಿ ನಗರದ ಟೌನ್​ಹಾಲ್​ ಮುಂದೆಯೂ ಪ್ರತಿಭಟನೆ ನಡೆಸಲಾಗುತ್ತಿತ್ತು. ಅದೇ ವೇಳೆಗೆ ಅಲ್ಲಿಗೆ ಬಂದ ಯುವತಿಯೊಬ್ಬಳು ಪಾಕಿಸ್ತಾನ್​ ಜಿಂದಾಬಾದ್​ ಎಂದು ಘೋಷಣೆ ಕೂಗಿದ್ದಾಳೆ ಎನ್ನಲಾಗಿದೆ.

ಈ ಕುರಿತಾಗಿ ಮಾಹಿತಿ ನೀಡಿರುವ ಪೊಲೀಸರು ಆಕೆ ಯಾವುದೇ ಘೋಷಣೆ ಕೂಗಿಲ್ಲ ಬದಲಾಗಿ ಕೈನಲ್ಲಿ ಫ್ರೀ ಕಾಶ್ಮೀರ್​ ಭಿತ್ತಿಪತ್ರ ಹಿಡಿದಿದ್ದಳು ಎಂದು ತಿಳಿಸಿದ್ದಾರೆ.

ಯುವತಿಯನ್ನು ಸ್ಥಳದಲ್ಲಿದ್ದ ಪೊಲೀಸರು ವಶಕ್ಕೆ ಪಡೆದಿದ್ದು ದೂರದ ಗೌಪ್ಯ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಆಕೆಯ ಕಾಲೇಜು, ಪೋಷಕರ ಕುರಿತಾಗಿ ವಿಚಾರಣೆ ನಡೆಸಲಾಗುತ್ತಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net