ದಲಿತರಿಗೆ ದಾರಿ ತಪ್ಪಿಸಲು ಕಾಂಗ್ರೆಸ್‌ನಿಂದ ಮತ್ತದೇ ಕುಯುಕ್ತಿ: ಗೋವಿಂದ ಕಾರಜೋಳ ಕಿಡಿ | Dalits should not fall into congress trap

govind karjol
Published on

ಬೆಂಗಳೂರು: ದೇಶ, ರಾಜ್ಯದಲ್ಲಿ ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ, ಸಂವಿಧಾನದ ಹೆಸರು ಹೇಳಿ ದಲಿತರಿಗೆ ಯಾಮಾರಿಸುತ್ತಲೇ ಬಂದಿದೆ. ಸುಳ್ಳು ಕಥಾನಕ ಹೆಣೆದು, ಹೇಳಿಕೆಗಳನ್ನು ತಿರುಚಿ ದಾರಿ ತಪ್ಪಿಸುವ ಹಳೇ ಟ್ರಿಕ್‌ಗಳನ್ನು ಮತ್ತೆ ಮತ್ತೆ ಬಳಸುತ್ತಿದೆ ಎಂದು ಸಂಸದ ಗೋವಿಂದ ಕಾರಜೋಳ Govind Karajol ಕಿಡಿ ಕಾರಿದರು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ದಲಿತರನ್ನು ಭಯ-ಭೀತಿಯಲ್ಲಿಟ್ಟು ವೋಟ್‌ಬ್ಯಾಂಕ್‌ನಂತೆ ಬಳಸಿಕೊಂಡಿದೆ. ಈಗಲೂ ಅಷ್ಟೇ ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಷಾ ಭಾಷಣದ ವಿಡಿಯೋ ತುಂಡರಿಸಿ ತಮಗೆ ಬೇಕಾದ ರೀತಿಯಲ್ಲಿ ತಿರುಚಿ ತಪ್ಪು ಮಾಹಿತಿ ಹರಡಿದ್ದಾರೆ.

ಕಾಂಗ್ರೆಸ್ ತನಗೆಂತಹ ವಂಚನೆ ಮಾಡಿದೆ ಎಂದು ವಿದ್ಯಾವಂತರಿಗೆ ಗೊತ್ತಿದೆ. ಆದರೂ ಅಮಾಯಕ ದಲಿತರು ಸಾಕಷ್ಟು ಸಂಖ್ಯೆಯಲ್ಲಿದ್ದು, ಕಾಂಗ್ರೆಸ್ ಹೆಣೆದಿರುವ ಮೋಸದ ಬಲೆಗೆ ಬೀಳಬಾರದು ಎಂದು ಸಲಹೆ ನೀಡಿದರು.

ವ್ಯತಿರಿಕ್ತವಾದ ನಡೆ

ಡಾ.ಅಂಬೇಡ್ಕರ್ ಜೀವಿತಾವಧಿಯುದ್ದಕ್ಕೂ ಕಾಂಗ್ರೆಸ್ ಅಪಮಾನಿಸಿತು. ಸತ್ತ ಮೇಲೆ ಸಮಾಧಿಗೆ ದೆಹಲಿಯಲ್ಲಿ ಜಾಗ ಕೊಡಲಿಲ್ಲ. ಬಾಬು ಜಗಜೀವನರಾಂ, ಸೀತಾರಾಂ ಕೇಸರಿ, ವಿ.ಪಿ.ಸಿಂಗ್, ರಾಜ್ಯದಲ್ಲಿ ಡಿ.ದೇವರಾಜ ಅರಸು ಅವರಿಗೆ ಕಾಂಗ್ರೆಸ್ ಅಪಮಾನ ಮಾಡಿದ್ದನ್ನು ಹೊಸ ಪೀಳಿಗೆಗೆ ನೆನಪಿಸುತ್ತೇನೆ.

ಸಂವಿಧಾನ ಪುಸ್ತಕ ಕೈಯ್ಯಲ್ಲಿಡಿದುಕೊಂಡು ಓಡಾಡಿದ ಮಾತ್ರಕ್ಕೆ ರಕ್ಷಕರಾಗುವುದಿಲ್ಲ. ವಾಜಪೇಯಿ ಕಾಲದಲ್ಲಿ ಬಡ್ತಿಯಲ್ಲಿ ಮೀಸಲಾತಿ ಜಾರಿಗೆ ಬಂತು. ಮೋದಿಯವರು ಕೆನೆಪದರು ಮೀಸಲು ಕೈಬಿಟ್ಟರು. ಸಂವಿಧಾನ, ಮೀಸಲು ವ್ಯವಸ್ಥೆ ರಕ್ಷಣೆ, ಡಾ.ಅಂಬೇಡ್ಕರ್ ನೈಜ ಗೌರವ ಬಿಜೆಪಿಯಿಂದ ಸಾಧ್ಯವಾಗಿದೆ ಎಂದು ಗೋವಿಂದ ಕಾರಜೋಳ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net