ಕೆತ್ತಿಕಲ್‌ನಲ್ಲಿ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ದ್ವಿಪಥ ಕಾಮಗಾರಿ ಪೂರ್ಣಗೊಂಡಿದೆ. ಸದ್ಯ ತಿರುವೈಲು ಸರ್ಕಾರಿ ಶಾಲೆಯಿಂದ ಸ್ವಲ್ಪ ಮುಂದಕ್ಕೆ ಗುಡ್ಡ ಕುಸಿಯುವ ಹಂತದಲ್ಲಿದ್ದರೂ ತಡೆಗೋಡೆ ಇದೆ. ಇಲ್ಲಿ ಗುಡ್ಡ ಕುಸಿತ ತಡೆಯಲು ಹಾಸಲಾದ ಅತ್ಯಾಧುನಿಕ ತಂತ್ರಜ್ಞಾನದ ಕಬ್ಬಿಣದ ಜಾಲಿ ತುಸು ಬಿಚ್ಚಿಕೊಂಡಿದೆ. ಇನ್ನು ಗುಡ್ಡದ ಮಣ್ಣು ಹೆದ್ದಾರಿಗೆ ಬೀಳುವುದೊಂದೇ ಬಾಕಿ. ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆ ಕಂಪನಿ ಡಿಬಿಎಲ್ ಸಿಬ್ಬಂದಿಯು ಜೆಸಿಬಿ ಬಳಸಿಕೊಂಡು ತೋಡು ಮಾಡಿ ಕೆಳಗಡೆ ನೀರು ಹರಿಯುವಂತೆ ಮಾಡುತ್ತಿದ್ದಾರೆ. ಜತೆಗೆ ಸಂಚಾರ ಸುಗಮಕ್ಕೆ ಬ್ಯಾರಿಕೇಡ್ ಬಳಸಲಾಗಿದ್ದು, ಸಿಬ್ಬಂದಿ ನಿಯುಕ್ತಿಗೊಳಿಸಿದ್ದಾರೆ.