

ಇಸ್ಲಾಮಾಬಾದ್: ಹಣದುಬ್ಬರದಿಂದ ಕಂಗೆಟ್ಟಿರುವ ಪಾಕಿಸ್ತಾನದಲ್ಲಿ ಇಂಧನ ತೈಲ ಬೆಲೆ ಈಗ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ.
ಉಸ್ತುವಾರಿ ಸರ್ಕಾರದ ನಿಯೋಜಿತ ಪ್ರಧಾನಿ ಅನ್ವಾರುಲ್ ಹಕ್ ಕಕರ್ ಅವರ ನಿರ್ದೇಶನದ ಮೇರೆಗೆ ಪೆಟ್ರೋಲ್ ಪ್ರತಿ ಲೀಟರ್ಗೆ 331.38 (26.02 ರೂ. ಹೆಚ್ಚಳ) ಹಾಗೂ ಡಿಸೇಲ್ ಪ್ರತಿ ಲೀಟರ್ಗೆ 239.18 ರೂ.ಗಳನ್ನು (17.34 ರೂ. ಹೆಚ್ಚಳ) ಶುಕ್ರವಾರ ರಾತ್ರಿಯಿಂದಲೇ ಬೆಲೆ ಏರಿಕೆ ಮಾಡಿರುವುದಾಗಿ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.
ಆಗಸ್ಟ್ ತಿಂಗಳಲ್ಲಿ ಉಂಟಾಗಿರುವ ಹಣದುಬ್ಬರದಿಂದಾಗಿ ಈವರೆಗೆ ಶೇ. 27.4ರಷ್ಟು ಇಂಧನ ತೈಲ ಬೆಲೆ ಏರಿಕೆ ಮಾಡಿದಂತಾಗಿದ್ದು, ಇದರಿಂದಾಗಿ ಖಾಸಗಿ ಮತ್ತು ಸಾರ್ವಜನಿಕ ಸೇವಾ ವಲಯದ ವಾಹನ ಸವಾರರಿಗೆ ಸಾಕಷ್ಟು ಹೊರೆಯಾಗಲಿದೆ ಎಂದು ಅಲ್ಲಿಯ ಡಾನ್ ಸುದ್ದಿ ಪತ್ರಿಕೆ ವರದಿ ಮಾಡಿದೆ.
ಇದೇ ತಿಂಗಳ ಸೆ.1 ರಂದು ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಪ್ರತಿ ಲೀಟರ್ಗೆ 14 ರೂ. ಹೆಚ್ಚಿಸಲಾಗಿತ್ತು. ಅಲ್ಲದೆ, ಆಗಸ್ಟ್ 15ರಂದು ಪೆಟ್ರೋಲ್ 32.41 ಮತ್ತು ಡಿಸೇಲ್ 38.49 ರೂ. ಏರಿಕೆ ಮಾಡಲಾಗಿತ್ತು. ಇದರಿಂದಾಗಿ ಕೇವಲ ಎರಡು ತಿಂಗಳಲ್ಲೇ ಪೆಟ್ರೋಲ್ ಪ್ರತಿ ಲೀಟರ್ಗೆ 58.43 ರೂ. ಮತ್ತು ಡಿಸೇಲ್ ಪ್ರತಿ ಲೀಟರ್ಗೆ 55.83 ರೂ. ಹೆಚ್ಚಿಸದಂತಾಗಿದೆ.