

ನವದೆಹಲಿ: ಬಂಗಾರದ ದರ ಗುರುವಾರ 1,000 ರೂಪಾಯಿ ಕುಸಿದು 10 ಗ್ರಾಂ ದರ 70,650 ರೂಪಾಯಿಗೆ ತಲುಪಿತು. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಕುಸಿತವಾಗಿ ಆಭರಣ ವರ್ತಕರು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಿದ್ದು ಗುರುವಾರದ ಭಾರಿ ಕುಸಿತಕ್ಕೆ ಕಾರಣವಾಗಿದೆ. ಬುಧವಾರ ಚಿನ್ನದ ಧಾರಣೆ 10 ಗ್ರಾಮ್ೆ 71,650 ರೂ. ಆಗಿತ್ತು ಎಂದು ಅಖಿಲ ಭಾರತ ಸರಾಫ ಸಂಘ ಹೇಳಿದೆ. ರಾಷ್ಟ್ರ ರಾಜಧಾನಿಯ ಚಿನಿವಾರ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಸತತ ಮೂರನೇ ದಿನವೂ ಕುಸಿದು ಶೇಕಡ 99.9 ಹಾಗೂ ಶೇ. 99.5 ಶುದ್ಧತೆಯ ಚಿನ್ನದ ದರ ತಲಾ 1,000 ರೂಪಾಯಿ ಇಳಿಯಿತು. ಹೀಗಾಗಿ ಅವುಗಳ 10 ಗ್ರಾಂ ದರ ಅನುಕ್ರಮವಾಗಿ 70,650 ರೂ. ಹಾಗೂ 70,300 ರೂ. ಆಗಿತ್ತು.
ಬಜೆಟ್ನಲ್ಲಿ ಸುಂಕ ಕಡಿತ: ಮಂಗಳವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2024-25ನೇ ಸಾಲಿನ ಆಯವ್ಯಯ ಪತ್ರದಲ್ಲಿ ಚಿನ್ನ ಮತ್ತು ಬೆಳ್ಳಿ ಮೇಲಿನ ಕಸ್ಟಮ್್ಸ ಸುಂಕವನ್ನು ಶೇ. 15ರಿಂದ ಶೇ. 6ಕ್ಕೆ ಇಳಿಸಿದ್ದು ಬಂಗಾರದ ದರದಲ್ಲಿ ಭಾರಿ ಇಳಿಕೆಗೆ ಹಾದಿ ಮಾಡಿಕೊಟ್ಟಿತ್ತು. ಮಂಗಳವಾರ 10 ಗ್ರಾಂ ಚಿನ್ನದ ಧಾರಣೆಯಲ್ಲಿ 3,350 ರೂ. ಕುಸಿತವಾಗಿತ್ತು.
ಮುಂಬೈ: ಷೇರು ಮಾರುಕಟ್ಟೆಯ ಪ್ರಮುಖ ಬೆಂಚ್ವಾರ್ಕ್ಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ಕುಸಿತವಾಗಿ ಹೂಡಿಕೆದಾರರ ನಷ್ಟ ಸತತ ಐದನೇ ದಿನವಾದ ಗುರುವಾರವೂ ಮುಂದುವರಿಯಿತು. ಹೂಡಿಕೆದಾರರು ಲೋಹ, ಬ್ಯಾಂಕಿಂಗ್ ಮತ್ತು ಹಣಕಾಸು ಕಂಪನಿಗಳ ಷೇರುಗಳನ್ನು ಮಾರಿದ್ದರಿಂದ ಮಾರುಕಟ್ಟೆ ವ್ಯವಹಾರಕ್ಕೆ ಮಂಕು ಕವಿಯಿತು. ವಿದೇಶಿ ಬಂಡವಾಳ ಹೊರಹೋಗಿದ್ದು ಕೂಡ ಅದಕ್ಕೆ ಕಾರಣವಾಯಿತು. ಬಿಎಸ್ಇ ಸೆನ್ಸೆಕ್ಸ್ನಲ್ಲಿ ದಿನದ ನಡುವೆ ಭಾರಿ ಕುಸಿತವಾದರೂ ನಂತರ ಚೇತರಿಸಿಕೊಂಡು ಅಂತ್ಯದಲ್ಲಿ 109.08 ಪಾಯಿಂಟ್ ಅಥವಾ ಶೇ. 0.14ರಲ್ಲಿ ಸ್ಥಿರವಾಯಿತು. ಎನ್ಎಸ್ಇ ನಿಫ್ಟಿಯಲ್ಲಿ 7.40 ಅಂಕ (ಶೇ. 0.03) ಕುಸಿತವಾಗಿ ದಿನದಂತ್ಯದಲ್ಲಿ 24,406.10ರಲ್ಲಿ ಸ್ಥಿರಗೊಂಡಿತು.