

ಬೆಂಗಳೂರು: ರಾಜ್ಯದಲ್ಲಿ ಕರೊನಾ ಅಟ್ಟಹಾಸ ಮುಂದುವರಿದಿದೆ. ಮಣಿಪುರದಿಂದ ಬೆಂಗಳೂರಿಗೆ ಬಂದಿದ್ದ ವೃದ್ಧರೊಬ್ಬರು ಕೊರೊನಾಕ್ಕೆ ಬಲಿಯಾಗಿರುವುದು ಗುರುವಾರ ದೃಢಪಟ್ಟಿದೆ.
ಇದರಿಂದಾಗಿ ಕರೊನಾದಿಂದ ಬೆಂಗಳೂರಿನಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದ್ದು, ಇಡೀ ರಾಜ್ಯದಲ್ಲಿ ಮೃತರ ಸಂಖ್ಯೆ 13ಕ್ಕೆ ಏರಿದೆ.
66 ವರ್ಷದ ಈ ವೃದ್ಧ ಏ. 9ರಂದು ಬೆಂಗಳೂರಿಗೆ ಬಂದಿದ್ದರು. ಮರುದಿನವೇ ಆಸ್ಪತ್ರೆಗೆ ದಾಖಲಾಗಿದ್ದರು.
ಏಪ್ರಿಲ್ 10ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಇವರನ್ನು ಬಳಿಕ ವಿಕ್ಟೋರಿಯಾಕ್ಕೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.