

ದಾವಣಗೆರೆ: ಕರೊನಾ ವೈರಸ್ ದಿನದಿಂದ ದಿನಕ್ಕೆ ಒಂದಲ್ಲ ಒಂದು ಜಿಲ್ಲೆಗೆ ಹರಡುತ್ತಿದೆ. ಈಗೆರಡು ದಿನಗಳ ಹಿಂದೆ ಚಿತ್ರದುರ್ಗದ ಮಹಿಳೆಯೋರ್ವರಲ್ಲಿ ಕರೊನಾ ಸೋಂಕು ದೃಢಪಟ್ಟಿತ್ತು. ಈಗ ದಾವಣಗೆರೆಗೂ ಮಹಾಮಾರಿ ಕಾಲಿಟ್ಟಿದೆ.
ದಾವಣಗೆರೆಯ ಸಿದ್ದವೀರಪ್ಪ ಲೇಔಟ್ ನಿವಾಸಿಯೋರ್ವರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದ್ದಾಗಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ಇವರು ಫ್ರಾನ್ಸ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಅಲ್ಲಿಂದ ಮರಳಿದ್ದ ಅವರಿಗೆ ಹೋಂ ಕ್ವಾರೆಂಟೈನ್ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಆದರೆ ಅದನ್ನು ಸರಿಯಾಗಿ ಪಾಲನೆ ಮಾಡಿರಲಿಲ್ಲ. ಮಾ.25ರಂದು ಅವರ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಸದ್ಯ ವರದಿ ಬಂದಿದ್ದು, ಕರೋನಾ ಇರುವುದು ದೃಢಪಟ್ಟಿದೆ.
ವ್ಯಕ್ತಿಯನ್ನು ಐಸೋಲೇಶನ್ ವಾರ್ಡ್ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಹಾಗೇ ಅವರ ಸಂಪರ್ಕಕ್ಕೆ ಬಂದಿದ್ದ 18 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ. ಆ ವ್ಯಕ್ತಿಯ ತಂದೆ-ತಾಯಿ, ತಂಗಿ, ವೈದ್ಯರು, ನರ್ಸ್ ಮತ್ತಿತರರನ್ನೂ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.