

ನವದೆಹಲಿ: ಕನ್ನಾಟ್ ಪ್ಲೇಸ್‌ನಲ್ಲಿ ಕಾರು ಚಾಲಕನೊಬ್ಬ ರಸ್ತೆ ದಾಟುತ್ತಿದ್ದ ವ್ಯಕ್ತಿಯ ಮೇಲೆ ಕಾರು ಚಲಾಯಿಸಿ ಸುಮಾರು 10 ಮೀಟರ್‌ವರೆಗೆ ಎಳೆದೊಯ್ದ ನಂತರ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಇಲ್ಲಿನ ಕನ್ನಾಟ್ ಎಂಬ ಪ್ರದೇಶದಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಯ ಮೇಲೆ ಕಾರು ಹರಿದಿದೆ. ಬಳಿಕ ಚಕ್ರದಡಿ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ಸುಮಾರು 10 ಮೀಟರ್‌ವರೆಗೆ ಎಳೆದೊಯ್ದಿದ್ದಾನೆ. ಬಳಿಕ ಕಾರು ನಿಲ್ಲಿಸದೇ ಪರಾರಿಯಾಗಿದ್ದಾನೆ. ಅಪಘಾತಗೊಂಡ ವ್ಯಕ್ತಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಆದರೆ, ವೈದ್ಯರು ಸಾವನ್ನಪ್ಪಿರುವುದಾಗಿ ಘೋಷಿಸಿದ್ಎಂದಾರೆ. ಲೇಖ್‌ರಾಜ್ (45) ಮೃತ ದುದೈವಿ.
ಪೊಲೀಸ್ ಅಧಿಕಾರಿಯ ಪ್ರಕಾರ, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾರು ಚಾಲಕ ಶಿವಂ ದುಬೆ(28)ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳದಲ್ಲಿ ಸಿಕ್ಕ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಚಾಲಕನನ್ನ ಪತ್ತೆಹಚ್ಚಿ, ನಂತರ ಬಂಧಿಸಿದ್ದಾರೆ.
ಈತ ಮಧ್ಯಪ್ರದೇಶ ಮೂಲದ ದುಬೆ ಮೂಲದವರಾಗಿದ್ದು, ಬುಧವಾರ ದೆಹಲಿಯ ಮಹಿಪಾಲ್ ಪುರದ ಸ್ನೇಹಿತನಿಂದ ಕಾರು ಪಡೆದಿದ್ದ. ಕನ್ನಾಟ್ ಪ್ರದೇಶದಲ್ಲಿ ವ್ಯಕಿಯೋರ್ವರನ್ನು ಭೇಟಿಯಾಗುವುದಕ್ಕೆ ಹೊರಟಿದ್ದ. ಆ ಸಮಯದಲ್ಲಿ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಂ ದುಬೆ ಘಟನೆ ನಡೆದ ನಂತರ ಅಲ್ಲಿಂದ ಪರಾರಿಯಾಗಿ ತನ್ನ ಸ್ನೇಹಿತನಿಗೆ ಕಾರು ಹಿಂತಿರುಗಿಸಿ ಕೊಟ್ಟಿದ್ದಾನೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ ಕಾರನ್ನು ಪರಿಶೀಲಿಸಿ ಮಾಲಿಕರನ್ನು ವಿಚಾರಿಸಿದಾಗ ಶಿವಂ ದುಬೆ ಕಾರು ಚಲಾಯಿಸಿರುವ ವಿಷಯ ತಿಳಿದಿದೆ. ನಂತರ ಆತನ್ನು ಬಂಧಿಸಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.