

ಬಾಳೆಹೊನ್ನೂರು: ರೇಣುಕಾನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ಮಹಾಪೂಜೆ ಬುಧವಾರ ವಿಜೃಂಭಣೆಯಿಂದ ನಡೆಯಿತು.
ವಾರ್ಷಿಕ ಮಹಾಪೂಜೆ ಅಂಗವಾಗಿ ಬೆಳಗ್ಗೆ ಮಹಾಗಣ ಹೋಮ, ಸತ್ಯನಾರಾಯಣ ಪೂಜೆ, ಸಂಕಷ್ಟಿ ಪೂಜೆ, ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ, ಸಂಜೆ ಭಕ್ತರಿಂದ ಭಜನಾ ಕಾರ್ಯಕ್ರಮ, ರಾತ್ರಿ ಮಹಾಮಂಗಳಾರತಿ ಜರುಗಿತು.
ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ಎಸ್.ಜಯಪ್ರಕಾಶ್, ಆಡಳಿತ ಮಂಡಳಿ ಸದಸ್ಯರಾದ ಎಂ.ಆರ್.ಬಾಲಕೃಷ್ಣ, ಎಂ.ಆರ್.ರವಿ ಗೌಡ, ಸತೀಶ್ ಕಿಣಿ, ಎಂ.ಎಸ್.ಚನ್ನಕೇಶವ, ಎ.ಕೆ.ಪಿ.ಕೃಷ್ಣ ಪೊದುವಾಳ್, ಎಂ.ಎಸ್.ಅರುಣೇಶ್, ಬಿ.ಸಿ.ಸಂತೋಷ್‌ಕುಮಾರ್, ಆರ್.ಡಿ.ಮಹೇಂದ್ರ, ಶಶಿಕಲಾ, ಎಂ.ಎಸ್.ಪ್ರವೀಣ್‌ಕುಮಾರ್, ಮಹೇಶ್ಚಂದ್ರ, ಉಮೇಶ್, ಮಹೇಶ್ ಆಚಾರ್ಯ, ಮಧುಸೂದನ್, ಸಂತೋಷ್ ಹಾಲಪ್ಪ ಗೌಡ ಇತರರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.