ಲೋಕ ಸಮರ; ಜನವರಿಗೆ ಮುಂಚಿತವಾಗಿ ಕೈ ಅಭ್ಯರ್ಥಿಗಳ ಘೋಷಣೆ!

election logo
Published on

ಬೆಂಗಳೂರು: ಲೋಕಸಭೆ ಚುನಾವಣೆಗೆ ತೆರೆಮರೆಯಲ್ಲಿ ಸಿದ್ಧತೆ ನಡೆಸಿರುವ ಕಾಂಗ್ರೆಸ್, ಅಭ್ಯರ್ಥಿಗಳ ಆಯ್ಕೆಗೆ ಅಭಿಪ್ರಾಯ ಸಂಗ್ರಹಿಸಿದೆ.

ಈಗಾಗಲೇ ಸಚಿವರು, ಪ್ರಮುಖ ಮುಖಂಡರಿಗೆ ಕ್ಷೇತ್ರವಾರು ವೀಕ್ಷಕರನ್ನು ನೇಮಿಸಿದೆ. ಅವರಿಂದ ವರದಿ ಬಯಸಿದೆ.

ಈ ವೀಕ್ಷಕರು ಪ್ರತಿ ಲೋಕಸಭೆ ಕ್ಷೇತ್ರದ ವಸ್ತುಸ್ಥಿತಿ, ಪಕ್ಷದ ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಪಕ್ಷಕ್ಕೆ ವರದಿ ನೀಡಿದ್ದಾರೆ. ಸಚಿವರುಗಳನ್ನು ಲೋಕಸಭೆ ಕ್ಷೇತ್ರಗಳ ವೀಕ್ಷಕರನ್ನಾಗಿ ನೇಮಿಸಿರುವ ಕುರಿತು ಮಾಧ್ಯಮ ಪ್ರತಿನಿಧಿಗಳು ಡಿಕೆಶಿಯವರನ್ನು ಪ್ರಶ್ನಿಸಿದಾಗ, 28 ಲೋಕಸಭಾ ಕ್ಷೇತ್ರಗಳಿಗೆ ಸಚಿವರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಇಬ್ಬರು -ಮೂವರು ಸಚಿವರನ್ನು ನೇಮಕ ಮಾಡಲು ಆಗಿಲ್ಲ. ಎಂ.ಬಿ. ಪಾಟೀಲರು ವಿದೇಶದಲ್ಲಿ, ಕೆ.ಜೆ.ಜಾರ್ಜ್ ಅವರು ಪಕ್ಷದ ಕೇಂದ್ರ ಸಮಿತಿಯಲ್ಲಿ ಇರುವ ಕಾರಣ ನೇಮಕ ಮಾಡಲು ಆಗಲಿಲ್ಲ ಎಂದರು.

ಎಲ್ಲಾ ಕ್ಷೇತ್ರಗಳ ವರದಿ 10 ದಿನಗಳಲ್ಲಿ ಕೈ ಸೇರಲಿದ್ದು, ಎರಡು ಅಥವಾ ಮೂರು ಹೆಸರುಗಳನ್ನು ಸೂಚಿಸಬಹುದೆಂದು ನಿರೀಕ್ಷೆಯಿದೆ. ಜನವರಿಗೆ ಮುಂಚಿತವಾಗಿ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net