ನಂದಿನಿ ಕರ್ನಾಟಕದ ಹೆಮ್ಮೆ; ಟ್ವೀಟ್​ ಮೂಲಕ ರಾಹುಲ್​​ ಗಾಂಧಿ ಕಾಲೆಳೆದ ತೇಜಸ್ವಿ ಸೂರ್ಯ, ಅಣ್ಣಾಮಲೈ

Tejasvi surya & annamalai
Published on

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ನಿಮಿತ್ತ ಭಾನುವಾರ ಕರ್ನಾಟಕ ಪ್ರವಾಸ ಕೈಗೊಂಡಿದ್ದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ KMFನ ಡೈರಿ ಉತ್ಪನ್ನಗಳನ್ನು ಸವಿದು ನಂದಿನಿ ನಮ್ಮ ಕರ್ನಾಟಕದ ಹೆಮ್ಮೆ ಎಂದು ಟ್ವೀಟ್​ ಮಾಡಿದ್ದರು.

ಇನ್ನು ರಾಹುಲ್​ ಗಾಂಧಿ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಸಂಸದ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ನಾಯಕ ಅಣ್ಣಾಮಲೈ ಕಾಂಗ್ರೆಸ್​ ನಾಯಕನ ಕಾಲೆಳೆದಿದ್ಧಾರೆ.

ಮಧ್ಯಪ್ರವೇಶಿಸಿ

ರಾಹುಲ್​ ಗಾಂಧಿ ಅವರು KMFನ ಉತ್ಪನ್ನಗಳನ್ನು ಬೆಸ್ಟ್​ ಎಂದು ಭಾವಿಸಿರುವುದು ಸಂತಸ ತಂದಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ.

ನಾನು ಈ ಮೂಲಕ ರಾಹುಲ್​ ಗಾಂಧಿ ಅವರಲ್ಲಿ ಕೇಳಿಕೊಳ್ಳುವೇನೆಂದರೆ ಕೇರಳದಲ್ಲಿ ನಂದಿನಿ ಉತ್ಪನ್ನಗಳ ಸುಗಮ ಮಾರಾಟಕ್ಕಾಗಿ ಕೂಡಲೇ ರಾಹುಲ್​ ಗಾಂಧಿ ಅವರು ಮಧ್ಯಪ್ರವೇಶಿಸಬೇಕು. ಇಲ್ಲದಿದ್ದರೆ ಇದು ಚುನಾವಣೆಯ ಸಮಯದಲ್ಲಿ ಮತ್ತೊಂದು ಗಿಮಿಕ್​ ಆಗುತ್ತದೆ.

ಕೇರಳದಲ್ಲಿ ನಂದಿನಿ ಉತ್ಪನ್ನಗಳ ಮಾರಾಟವನ್ನು ರಾಹುಲ್​ ಗಾಂಧಿ ಘೋಷಿಸಲಿದ್ಧಾರೆ ಎಂದು ನಾನು ಭಾವಿಸಿದ್ದೇನೆ ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್​ ಮಾಡಿದ್ಧಾರೆ.

ಸೀಮಿತಗೊಳಿಸಬೇಡಿ

ಇನ್ನು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ರಾಹುಲ್​ ಗಾಂಧಿ ಟ್ವೀಟ್​ಗೆ ಪ್ರತಿಕ್ರಿಯಿಸಿ ಸರ್​ ನಿಮ್ಮ ಪೂರ್ವಜರ ಹೆಸರನ್ನು ಸುತ್ತುವರೆದಿರುವ ಬ್ರ್ಯಾಂಡ್​ಗಳಿಗಿಂತ ತಮಿಳುನಾಡಿನ ಅವಿನ್​ ಹಾಗೂ ಕರ್ನಾಟಕ ನಂದಿನಿ ಅಂತರಾಷ್ಟ್ರೀಯ ಉತ್ಪನ್ನಗಳಾಗಿ ರೂಪಾಂತರಗೊಳ್ಳುತ್ತಿವೆ.

ಮೋದಿ ಅವರ ಆತ್ಮನಿರ್ಭರ ಭಾರತದಲ್ಲಿ ಈ ಉತ್ಪನ್ನಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದು ದಯವಿಟ್ಟು ಇದನ್ನು ಒಂದು ಸ್ಥಳಕ್ಕೆ ಸೀಮಿತಗೊಳಿಸಬೇಡಿ ಎಂದು ರಾಹುಲ್​ ಗಾಂಧಿ ಟ್ವೀಟ್​ಗೆ ಪ್ರತಿಕ್ರಿಯಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net