ಬಿಗ್​ ಬಾಸ್​ ಮನೆಯಲ್ಲಿ ಡಿವೋರ್ಸ್​ ನಿರ್ಧಾರ ಮಾಡಿದ ಸ್ಪರ್ಧಿ!

bigg boss
Published on

ಬೆಂಗಳೂರು:  ಬಿಗ್​ಬಾಸ್​ ಕಾರ್ಯಕ್ರಮ ಸುಮಾರು ಆರೆಳು ಭಾಷೆಯಲ್ಲಿ ಪ್ರಸಾರವಾಗುತ್ತಿದೆ. ಆದರೆ ಹಿಂದಿ ಬಿಗ್​ಬಾಸ್​ ಕಾರ್ಯಕ್ರಮವು ಹಲವು ವಿಚಾರವಾಗಿ ಸುದ್ದಿಯಲ್ಲಿದೆ. ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಯಲ್ಲಿ ಗಂಡ ಹೆಂಡತಿ ಡಿವೋರ್ಸ್ ಬಗ್ಗೆ ಮಾತನಾಡಿದ ಘಟನೆ ನಡೆದಿದೆ.

ಹಿಂದಿ ಬಿಗ್ ಬಾಸ್ ಮನೆಯಲ್ಲಿ ಕಿರುತೆರೆ ತಾರಾ ದಂಪತಿಯಾದ ವಿಕ್ಕಿ ಜೈನ್ ಮತ್ತು ಅಂಕಿತಾ ಲೋಖಂಡೆ ಇದ್ದಾರೆ. ಅವರೇ ಇದೀಗ ಡಿವೋರ್ಸ್ ಕುರಿತು ಮಾತನಾಡಿದ್ದಾರೆ.

ಇತ್ತೀಚಿನ ಸಂಚಿಕೆಯಲ್ಲಿ ವಿಕ್ಕಿ ಜೈನ್​ ಅವರು ವಿವಾಹಿತ ಪುರುಷರ ಕಷ್ಟಗಳ ಬಗ್ಗೆ ಮಾತನಾಡುತ್ತಿದ್ದರು. ಮದುವೆ ಬಳಿಕ ಗಂಡಸಿಗೆ ಅಷ್ಟೆಲ್ಲ ಕಷ್ಟ ಆಗುತ್ತೆ ಎಂಬುದಾದರೆ ವಿಚ್ಛೇದನ ಪಡೆಯೋಣ ಎಂದು ಅಂಕಿತಾ ಲೋಖಂಡೆ ಹೇಳಿದ್ದಾರೆ. ಇವರ ಮಾತುಗಳನ್ನು ಕೇಳಿಸಿಕೊಂಡ ಇನ್ನುಳಿದ ಸ್ಪರ್ಧಿಗಳಿಗೆ ಮತ್ತು ಪ್ರೇಕ್ಷಕರಿಗೆ ಶಾಕ್​ ಆಗಿದೆ.

ಹಿಂದಿ ಕಿರುತೆರೆಯ ಧಾರಾವಾಹಿಗಳ ಮೂಲಕ ಫೇಮಸ್​ ಆದವರು ಅಂಕಿತಾ ಲೋಖಂಡೆ. ‘ಪವಿತ್ರ ರಿಷ್ತಾ’ ಸೀರಿಯಲ್​ನಲ್ಲಿ ನಟಿಸುವಾಗ ಅವರಿಗೆ ಸುಶಾಂತ್​ ಸಿಂಗ್​ ರಜಪೂತ್​ ಜೊತೆ ಪ್ರೀತಿ ಚಿಗುರಿತ್ತು. ನಂತರ ಅವರಿಬ್ಬರು ಬ್ರೇಕಪ್​ ಮಾಡಿಕೊಂಡರು. ಆ ಬಳಿಕ ಅಂಕಿತಾ ಅವರ ಬದುಕಿನಲ್ಲಿ ಬಂದಿದ್ದೇ ವಿಕ್ಕಿ ಜೈನ್​. ಡಿಸೆಂಬರ್ 2021 ರಲ್ಲಿ, ಅಂಕಿತಾ ಲೋಖಂಡೆ ಅವರು ಉದ್ಯಮಿ ವಿಕ್ಕಿ ಜೈನ್ ಅವರೊಂದಿಗೆ ವಿವಾಹವಾದರು. ಅದೇ ವರ್ಷದ ಅಕ್ಟೋಬರ್‌ನಲ್ಲಿ ದಂಪತಿ ಬಿಗ್ ಬಾಸ್ 17 ಮನೆಗೆ ಜಂಟಿಯಾಗಿ ಎಂಟ್ರಿ ಕೊಟ್ಟರು. ಅವರು ಆಗಾಗ್ಗೆ ತೀವ್ರವಾದ ವಾದಗಳಲ್ಲಿ ತೊಡಗುತ್ತಾರೆ. ಈಗ ಈ ದಂಪತಿ ಬಿಗ್​ ಬಾಸ್​ ಮನೆಯೊಳಗೆ ಕಿತ್ತಾಡಿಕೊಂಡಿದ್ದಾರೆ.

ಬಿಗ್​ ಬಾಸ್​ ಮುಗಿದ ನಂತರ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್​ ಅವರು ಡಿವೋರ್ಸ್ ​ ಪಡೆಯುವುದು ಖಚಿತ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net