

ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ ಭಾರತದ ಕನಸು ಕಟ್ಟಿಕೊಟ್ಟಿದ್ದಾರೆ. ದೇಶದಲ್ಲಿ 14.5 ಕೋಟಿಗೂ ಅಧಿಕ ಕೃಷಿಕುಟುಂಬಗಳಿವೆ. ಭಾರತ ಆತ್ಮನಿರ್ಭರವಾಗಲು ಕೃಷಿಯಲ್ಲಿ ಸದೃಢತೆ ಸಾಧಿಸುವುದು ಅವಶ್ಯಕ. ಹೀಗಾಗಿ ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸಲು ಇರುವ ಸವಾಲುಗಳನ್ನು ಪರಿಹರಿಸಲು 2016ರಲ್ಲಿ ಅಂತರ್ ಇಲಾಖೆ ಸಮಿತಿ ರಚಿಸಿತು.
ಈ ಸಮಿತಿ 2018ರ ಸೆಪ್ಟೆಂಬರ್ನಲ್ಲಿ ನೀಡಿದ ವರದಿಯಂತೆ 2011-12ರಲ್ಲಿ ಕೃಷಿ ಕುಟುಂಬವೊಂದರ ವಾಷಿರ್ಕ ಆದಾಯ 96,718 ರೂ. ಇದ್ದು, 2015-16ರಲ್ಲಿ ಇದು 1,54,399ಗೆ ಏರಿಕೆಯಾಗಿತ್ತು. 2023-24ರ ವೇಳೆಗೆ ಇದನ್ನು 2,84,888 ರೂ.ಗಳಿಗೆ ಏರಿಸುವ ಗುರಿ ಇಟ್ಟುಕೊಂಡು 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಲು 7 ಪ್ರಮುಖ ಅಂಶಗಳನ್ನು ಶಿಾರಸ್ಸು ಮಾಡಿತು. ಬೆಳೆ ಉತ್ಪಾದಕತೆ ವೃದ್ಧಿಸುವುದು, ಪಶು ಸಂಗೋಪನೆಗೆ ಉತ್ತೇಜಿಸುವುದು, ಸಂಪನ್ಮೂಲಗಳ ಸದ್ಭಳಕೆ ಜೊತೆಗೆ ಉತ್ಪಾದನಾ ವೆಚ್ಚಕ್ಕೆ ಕಡಿವಾಣ ಹಾಕುವುದು, ಸಮಗ್ರ ಕೃಷಿ ಅಳವಡಿಸುವುದು, ಲಾಭದಾಯಕ ಬೆಳೆಗಳನ್ನು ಪೋತ್ಸಾಹಿಸುವುದು, ರೈತರಿಗೆ ದೊರೆಯುವ ಮೂಲಬೆಲೆ ಮೌಲ್ಯ ವೃದ್ಧಿಸುವುದು, ಕೃಷಿ ನವೋದ್ಯಮಗಳನ್ನು ಪ್ರಾರಂಭಿಸವುದು ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸುವ ಮಹತ್ವಾಕಾಂಕ್ಷೆಗಳೊಂದಿಗೆ ರೈತರ ಆದಾಯ ದ್ವಿಗುಣ ಅಭಿಯಾನ ಆರಂಭವಾಗಿದೆ. ಇದನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಹಿರಿಯ ಐಎಎಸ್ ಅಧಿಕಾರಿ ಅಶೋಕ ದಳವಾಯಿ ಅಧ್ಯಕ್ಷತೆಯಲ್ಲಿ ವಿಶೇಷ ತಜ್ಞರ ಸಮಿತಿ ರಚಿಸಲಾಗಿದೆ.
ಉದ್ಯಮ ಹಾಗೂ ಸೇವಾ ವಲಯಕ್ಕೆ ಹೊಲಿಸಿದರೆ ಕೃಷಿಕ್ಷೇತ್ರಕಡಿಮೆ ಬೆಳವಣಿಗೆಯಾಗಿದೆ. 1951-52 ರಿಂದ ಇಲ್ಲಿಯವರೆಗೆ ಉದ್ಯಮ ಕ್ಷೇತ್ರ ಶೇ. 6.1 ಅಭಿವೃದ್ಧಿ ಕಂಡಿದ್ದರೆ, ಸೇವಾ ವಲಯ ಶೇ. 6.2ರಷ್ಟು ಅಭಿವೃದ್ಧಿ ಕಂಡಿದೆ. ಆದರೆ ಕೃಷಿ ವಲಯದ ಪ್ರಗತಿ ಶೇ 2.9 ಮಾತ್ರ. ಈ ಅಸಮಾನತೆ ಲವಾಗಿ ದೇಶದ ಜಿಡಿಪಿಯಲ್ಲಿ ಕೃಷಿ ಪಾಲು ಕುಸಿದಿದೆ. ಆದರೆ ಡಾ. ಎಂ.ಎಸ್.ಸ್ವಾಮಿನಾಥನ್ ವರದಿ ಪ್ರಕಾರ ದೇಶದ ಶೇ.58ರಷ್ಟು ಜನಸಂಖ್ಯೆಗೆ ಕೃಷಿ ಹಾಗೂ ಕೃಷಿ ಆಧಾರಿತ ಕೈಗಾರಿಕಗಳೇ ಉದ್ಯೋಗ ಸೃಷ್ಟಿಸುತ್ತಿವೆ. 1947ರಲ್ಲಿ ದೇಶದ ಜಿಡಿಪಿಯಲ್ಲಿ ಕೃಷಿ ಪಾಲು ಶೇ.53.1ರಷ್ಟಿದ್ದರೆ 2020-21ರ ವೇಳೆಗೆ ಶೇ.20.19ಕ್ಕೆ ಕುಸಿದಿದೆ. ಕೃಷಿ ಸದೃಢವಾಗಬೇಕಾದರೆ ಯುವಕರು ಕೃಷಿಯಿಂದ ವಿಮುಖರಾಗಬಾರದು. ಕೃಷಿಗೆ ವೃತ್ತಿಪರತೆ ತುಂಬಿ ಲಾಭದಾಯಕ ಉದ್ಯಮವಾಗಿ ಪರಿವತಿರ್ಸಬೇಕು. ಉತ್ಪಾದನಾ ಕೇಂದ್ರಿತವಾದ ಕೃಷಿ ವ್ಯವಸ್ಥೆ ಆದಾಯ ಕೇಂದ್ರಿತವಾಗಿ ಬದಲಾಗಬೇಕು.
ಉತ್ಪಾದನಾ ವೆಚ್ಚ ಕಡಿತ:
ತಂತ್ರಜ್ಞಾನದ ಬಳಕೆ ಹಾಗೂ ಸುಧಾರಿತ ಕೃಷಿ ಪದ್ಧತಿಯು ಉತ್ಪಾದನಾ ವೆಚ್ಚಕ್ಕೆ ಕಡಿವಾಣ ಹಾಕುವ ಜೊತೆಗೆ ಉತ್ತಮ ಇಳುವರಿಯನ್ನು ನೀಡುತ್ತದೆ. ಕೇಂದ್ರ ಸರ್ಕಾರ ರೈತನಿಗೆ ಕೃಷಿಕಾರ್ಯಗಳಿಗೆ ಸಹಾಯವಾಗಲು ಪಿ.ಎಂ.ಕಿಸಾನ್ ಸಮ್ಮಾನ ಯೋಜನೆಯಡಿ ವಾಷಿರ್ಕ 6,000 ರೂ.ಗಳ ಸಹಾಯಧನ ನೀಡುತ್ತಿದೆ. ಕರ್ನಾಟಕ ಸರ್ಕಾರ ಹೆಚ್ಚುವರಿಯಾಗಿ 4,000 ರೂ. ನೀಡುತ್ತಿದೆ.
ದುಡಿಯುವ ಮನುಷ್ಯನಿಗೆ ಒಳ್ಳೆಯ ಆರೋಗ್ಯ ಎಷ್ಟು ಮುಖ್ಯವೋ ಹಾಗೆ ಸಲು ನೀಡುವ ಮಣ್ಣಿನ ಆರೋಗ್ಯ ರಕ್ಷಣೆ ಅಷ್ಟೇ ಮುಖ್ಯ. ಅದ್ದರಿಂದ ಬೆಳೆಯ ಮೇಲ್ವಿಚಾರಣೆ ಹಾಗೂ ಮಿತವಾಗಿ ರಸಗೊಬ್ಬರ ಬಳಸಲು ರೈತನಿಗೆ ಕೇಂದ್ರ ಸರ್ಕಾರ "ಸಾಯಿಲ್ ಹೆಲ್ತ್ಕಾರ್ಡ್' ನೀಡುತ್ತಿದೆ.
ನೀರಾವರಿ ಸದ್ಬಳಕೆ:
ಸಾಂಪ್ರದಾಯಿಕ ನೀರಾವರಿಯಿಂದ ಇಳುವರಿ ಕಡಿಮೆಯಾಗುವ ಜೊತೆಗೆ ನೀರು ಕೂಡ ಪೋಲಾಗುತ್ತದೆ. ಹನಿ ನೀರಾವರಿ ಅಳವಡಿಸಿಕೊಂಡರೆ ಮಿತವಾಗಿ ನೀರು ಬಳಸುವುದರೊಡನೆ ಕಡಿಮೆ ನೀರಿನಲ್ಲಿ ಹೆಚ್ಚು ಭೂಮಿಯಲ್ಲಿ ಕೃಷಿ ಮಾಡಬಹುದು. ಅದ್ದರಿಂದ ಕೇಂದ್ರ ಸರ್ಕಾರ "ಪರ್ ಡ್ರಾಪ್ ಮೋರ್ ಕ್ರಾಪ್' ಮೂಲಕ ಸೂಕ್ಷ$್ಮ ನೀರಾವರಿಗೆ ಪೋತ್ಸಾಹಿಸುತ್ತಿದೆ. ಹೊಸ ನೀರಾವರಿ ಕ್ಷೇತ್ರವೃದ್ಧಿಗಾಗಿ ಪೆನಿನ್ಸೂಲಾರ್ ನದಿ ಜೋಡಣೆಗೆ ಸಜ್ಜಾಗಿದೆ. ಆನೇಕ ವರ್ಷಗಳಿಂದ ನಿಂತು ಹೋಗಿದ್ದ 99 ಅಣೆಕಟ್ಟುಗಳನ್ನು ಪೂರ್ಣಗೊಳಿಸಿ 79 ಲಕ್ಷ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ನೀಡಲು ಯೋಜನೆ ರೂಪಿಸಿದೆ. ಕಾರ್ಪಸ್ ನಿಧಿ ಮೂಲಕ ಸೂಕ್ಷ$್ಮ ನೀರಾವರಿಗೆ 5,000 ಕೋಟಿ ರೂ.ಗಳನ್ನು ಮಿಸಲಿಟ್ಟಿದ್ದು ಒಳ್ಳೆಯ ಬೆಳವಣಿಗೆ. ಕರ್ನಾಟಕದಲ್ಲಿ ಒಟ್ಟು 36 ಲಕ್ಷ ಹೆಕ್ಟೇರ್ ನೀರಾವರಿ ೇತ್ರವಿದ್ದು, ಈ ಪೈಕಿ 16 ಲಕ್ಷ ಹೆಕ್ಟೇರ್ ಸಣ್ಣ ನೀರಾವರಿಗೆ ಒಳಪಟ್ಟಿದೆ.
ಕೃಷಿ ಆಧಾರಿತ ಉದ್ಯಮ:
ಕೃಷಿ ಆಧಾರಿತ ಉದ್ಯಮಗಳು ರೈತರಿಗೆ ನಿಶ್ಚಿತ ಮಾರುಕಟ್ಟೆ ಒದಗಿಸುತ್ತವೆ. ಅದರೊಡನೆ ಗ್ರಾಮೀಣ ಪ್ರದೇಶದಲ್ಲಿ ಉದ್ಯಮ ಕ್ರಾಂತಿಗೆ ದಾರಿಯಾಗುತ್ತದೆ. ಅಲ್ಲದೆ, ಕೇಂದ್ರ ಸರ್ಕಾರ ಕಬ್ಬು ಹಾಗೂ ಧಾನ್ಯಗಳಿಂದ ಇಥೇನಾಲ್ ತಯಾರಿಕೆಗೆ ಪ್ರೋತ್ಸಾಹ ನೀಡುತ್ತಿದೆ. ಯುವ ರೈತರು ಕೃಷಿ ನವೋದ್ಯಮ ಪ್ರಾರಂಭಿಸಲು ಪಿ.ಎಂ.ಎಫ್.ಎಂ.ಎ ಯೋಜನೆಯಡಿ "ಒಂದು ಜಿಲ್ಲೆ ಒಂದು ಉತ್ಪನ್ನ' ಮಾರ್ಗದಶಿರ್ಯಡಿ ಸಹಾಯ ಪಡೆಯಬಹುದಾಗಿದೆ.
ನಿಶ್ಚಿತ ಬೆಂಬಲ ಬೆಲೆ:
ಕೃಷಿ ಸುಸ್ಥಿರವಾಗಬೇಕಾದರೆ ರೈತನಿಗೆ ಕನಿಷ್ಠ ಬೆಂಬಲ ಬೆಲೆ, ಉತ್ತಮ ಮಾರುಕಟ್ಟೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಉತ್ಪಾದನೆ, ಪೂರೈಕೆ ಹಾಗೂ ಬೇಡಿಕೆಯ ನಡುವೆ ಸಮತೋಲನ ಸಾಧಿಸುವುದು ಅವಶ್ಯ. ರೈತನಿಗೆ ಉತ್ತಮ ಬೆಳೆ ಬಂದರೂ ಬೆಲೆ ಸಿಗದೆ ಕಂಗಾಲಾಗುತ್ತಾನೆ. ಹೀಗಾಗಿ 2018-19ರಿಂದ ಮುಂಗಾರು ಹಾಗೂ ಹಿಂಗಾರು 2 ಬೆಳೆಗಳಿಗೂ ಅನ್ವಯವಾಗುವಂತೆ ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ)ಯನ್ನು ಉತ್ಪಾದನಾ ವೆಚ್ಚದ ಕನಿಷ್ಠ ಶೇ.150ರಷ್ಟು ಹೆಚ್ಚಿಸಲಾಗಿದೆ. ಎಂ.ಎಸ್.ಪಿ. ಅಡಿ ಜಿಲ್ಲಾವಾರು ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿದಲ್ಲಿ ಅನುಕೂಲವಾಗುತ್ತದೆ.
ಉತ್ತಮ ಮಾರುಕಟ್ಟೆ:
ಕೃಷಿ ಉತ್ಪನಗಳು ಮಾರುಕಟ್ಟೆಗೆ ತಲುಪುವ ಮೊದಲೇ ಶೇ. 20-30ರಷ್ಟು ನಾಶವಾಗುತ್ತಿವೆ, ಇದನ್ನು ತಡೆಯಲು ಸ್ಟೋರೇಜ್, ಸಾರಿಗೆ ಮತ್ತು ಪೊಸೆಸಿಂಗ್ ಬಗ್ಗೆ ಗಮನ ಹರಿಸಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 6-7 ಕಿ.ಮೀ. ಅಂತರದಲ್ಲಿ ಮೊದಲ ಹಂತದಲ್ಲಿ 22 ಸಾವಿರ ಸಣ್ಣ ಪ್ರಮಾಣದ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಸ್ಥಾಪಿಸಲು ಸಜ್ಜಾಗಿದೆ. ರೈತನ ಬಹುತೇಕ ಆದಾಯ ಮಧ್ಯವತಿರ್ಗಳ ಪಾಲಾಗುತ್ತಿದೆ. ಆನಲೈನ್ ಸ್ಪರ್ಧಾತ್ಮಕ ಮಾರುಕಟ್ಟೆ ಸೃಷ್ಟಿಸಿ ಪಾರದರ್ಶಕತೆ ಕಾಯ್ದುಕೊಳ್ಳಲು ಇ-ನ್ಯಾಮ್ ವ್ಯವಸ್ಥೆ ಸಹಕಾರಿಯಾಗಿದೆ. 2024ರ ವೇಳೆಗೆ 10 ಸಾವಿರ ಹೊಸ ಕೃಷಿ ಉತ್ಪಾದಕರ ಸಂಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ಕೇಂದ್ರ ಸರ್ಕಾರ ಹೊಸ ರ್ತು ನೀತಿ ರೂಪಿಸಿದ್ದು, ಕೃಷಿ ಉತ್ಪನ ರ್ತನ್ನು ದುಪ್ಪಟ್ಟು ಮಾಡುವ ಚಿಂತನೆ ನಡೆಯುತ್ತಿವೆ. ಅಗತ್ಯ ಸರಕುಗಳ ಕಾಯ್ದೆ-1955ಕ್ಕೆ ತಿದ್ದುಪಡಿ ತಂದ ಪರಿಣಾಮ ವಿವಿಧ ಕೃಷಿ ಸರಕುಗಳ ಮೇಲಿನ ನಿಯಂತ್ರಣ ತೆರವುಗೊಳಿಸಿದ್ದು ರೈತರಿಗೆ ಅನುಕೂಲವಾಗಲಿದೆ. ಗ್ರಾಮೀಣ ಕೃಷಿ ಮಾರುಕಟ್ಟೆ ಬಲವರ್ಧನೆಗಾಗಿ 2 ಸಾವಿರ ಕೋಟಿ ರೂ. ಹಾಗೂ ಸರಕು ಸಾಗಣೆ ಅಗ್ರಿ ಲಾಜೆಸ್ಟಿಕ್ ಮತ್ತು ಕೃಷಿ ಮೂಲಸೌಕರ್ಯ ವೃದ್ಧಿಗಾಗಿ 1 ಲಕ್ಷ ಕೋಟಿ ರೂ. ಹಣ ಮೀಸಲಿಡಲಾಗಿದೆ. ರಾಜ್ಯದಲ್ಲಿ ಆಹಾರ ಪಾರ್ಕ್ಗಳನ್ನು ಬಲವರ್ಧನೆಗೊಳಿಸಿ ಅವುಗಳಿಗೆ ಲಾಜೆಸ್ಟಿಕ್ ಒದಗಿಸುವುದರಿಂದ ಆಹಾರ ಸಂಸ್ಕರಣಾ ಕ್ಷೇತ್ರವನ್ನು ಉತ್ತೇಜಿಸಬಹುದು.
ಬ್ಯಾಂಕಗಳು ರೈತಸ್ನೇಹಿಯಾಗಬೇಕು:
ಬ್ಯಾಂಕ್ಗಳು ಕೃಷಿ ವಲಯಕ್ಕೆ ನೀಡುವ ಸಾಲದ ವಾಷಿರ್ಕ ಗುರಿಯನ್ನು ಹೆಚ್ಚಿಸಲಾಗುತ್ತಿದೆ. ವಾಷಿರ್ಕ ಸಾಲದ ಗುರಿ 2019-20ರಲ್ಲಿ 13.5 ಲಕ್ಷ ಕೋಟಿ ರೂ. ನೀಡಿದ್ದರೆ 2020-21ಕ್ಕೆ 15 ಲಕ್ಷ ಕೋಟಿ ರೂ. ಏರಿಸಲಾಯಿತು. ಸಾಂಸ್ಥಿಕ ಸಾಲದ ವ್ಯಾಪ್ತಿಯನ್ನು ಹೆಚ್ಚು-ಹೆಚ್ಚು ರೈತರಿಗೆ ವಿಸ್ತರಿಸುವುದಕ್ಕಾಗಿ ಸರ್ಕಾರ ರೈತರಿಗೆ ಶೇ.4 ಬಡ್ಡಿದರದಲ್ಲಿ 3 ಲಕ್ಷ ರೂ.ವರೆಗೆ ಅಲ್ಪಾವಧಿ ಬೆಳೆಸಾಲ ನೀಡುತ್ತಿದೆ. ತ್ವರಿತ ಮರುಪಾವತಿ ಮಾಡುವವರಿಗೆ ಶೇ. 2 ಬಡ್ಡಿದರದ ರಿಯಾಯಿತಿ ಸೌಲಭ್ಯ ನೀಡಲಾಗಿದೆ.
ಸೆಕೆಂಡರಿ ಅಗ್ರಿಕಲ್ಚರ್:
ಬೇಸಾಯ ಮಾಡಿ ಸಲು ತೆಗೆಯುವುದು ಪೆಮರಿ ಅಗ್ರಿಕಲ್ಚರ್. ಆದರೆ ಆ ಉತ್ಪನ್ನವನ್ನು ಮೌಲ್ಯವರ್ಧನಗೊಳಿಸಿ ಗ್ರಾಹಕರಿಗೆ ತಲುಪಿಸುವುದು ಸೆಕೆಂಡರಿ ಅಗ್ರಿಕಲ್ಚರ್. ರೈತ ತನ್ನ ಉತ್ಪನದ ಸ್ಟೋರೇಜ್, ಪೊಸೆಸಿಂಗ್, ಪ್ಯಾಕಿಂಗ್, ಬ್ರಾ$್ಯಂಡಿಂಗ್, ಮಾರ್ಕೆಟಿಂಗ್ ಮಾಡುವುದನ್ನು ಕಲಿಯಬೇಕು. ಇದರರ್ಥ ಉತ್ಪಾದನೆ ಮಾತ್ರವಲ್ಲ, ಮಾರುಕಟ್ಟೆ ಲಾಭಗಳು ರೈತನಿಗೆ ದೊರೆಯಬೇಕು. ಮಾರುಕಟ್ಟೆ ಜ್ಞಾನ, ಮೂಲಸೌಕರ್ಯ, ಮೌಲ್ಯವರ್ಧನೆ ಬಗೆಗಳನ್ನು ಅರಿಯದೆ ರೈತ ತನ್ನ ಉತ್ಪನ್ನವನ್ನು ಕಡಿಮೆ ಬೆಲೆಗೆ ಮಾರಿ ಸೋಲುತ್ತಿದ್ದಾನೆ. ಹಾಲು ನಮ್ಮದು, ಪನ್ನೀರ್ ಅವರದ್ದು, ಟೋಮ್ಯಾಟೋ ನಮ್ಮದು ಕೆಚಪ್ ಲಾಭ ಇನ್ನಾರದ್ದೋ ಆಗಿದೆ. ಇದು ಬದಲಾಗಬೇಕು. ರೈತ ವಿದ್ಯಾವಂತನಾಗಿದ್ದಾನೆ. ಅವನ ಮಕ್ಕಳು ತಂತ್ರಜ್ಞಾನ ಅರಿತಿದ್ದಾರೆ. ರೈತನ ಮಕ್ಕಳು ನೌಕರಿಗೆ ಅಲೆಯದೆ ಕಿರು ಉದ್ಯಮ ತೆರೆದರೆ ಅಪ್ಪನ ಶ್ರಮಕ್ಕೆ ಸಾರ್ಥಕತೆ ತರುವುದರೊಂದಿಗೆ ಕುಟುಂಬದ ಆದಾಯವನ್ನು ದ್ವಿಗುಣಗೊಳಿಸಬಹುದು. ಈ ಸಂಬಂಧ ಕರ್ನಾಟಕ ಸರ್ಕಾರ ದೇಶದಲ್ಲಿಯೇ ಪ್ರಥಮ ಬಾರಿಗೆ ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ ಸ್ಥಾಪಿಸಿರುವುದು ಸ್ವಾಗತಾರ್ಹ. 2022-23ರ ಬಜೆಟ್ನಲ್ಲಿ ಈ ನಿರ್ದೇಶನಾಲಯಕ್ಕೆ ಪ್ರತ್ಯೇಕ ಅನುದಾನ ಹಂಚಿಕೆ ಮಾಡಿದಲ್ಲಿ ಅನುಕೂಲವಾಗುತ್ತದೆ.
ಸರ್ಕಾರ ರೈತರ ಆತ್ಮಹತ್ಯೆ ವಿಷಯದಲ್ಲಿ ಸಹಾನುಭೂತಿ ತೋರುವ ಬದಲು ಆತ್ಮಹತ್ಯೆ ಮಾಡಿಕೊಳ್ಳದಂತೆ ಸದೃಢವಾಗಿ ಜೊತೆ ನಿಲ್ಲಬೇಕು. ಸ್ಥಿತಿವಂತರು ಸರ್ಕಾರದ ಸವಲತ್ತುಗಳನ್ನು ಸಣ್ಣ ರೈತರಿಗೆ ಬಿಟ್ಟು ಕೊಡಬೇಕು. ನಮ್ಮ ಹಳ್ಳಿ, ತಾಲ್ಲೂಕು, ಜಿಲ್ಲೆಗಳು ಹಾಗೂ ರೈತರು ಮೊದಲು ಆತ್ಮನಿರ್ಭರವಾಗಬೇಕು. ರೈತ ವಿಕಾಸವಾದರೆ ಮಾತ್ರ ಭಾರತ ವಿಕಾಸ ಎಂಬುದನ್ನು ಅರಿತು ನಡೆದರೆ ರೈತರ ಆದಾಯವನ್ನು ದ್ವಿಗುಣಗೊಳಿಸಬಹುದು.
(ಲೇಖಕರು ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷರು)