ಗೋಣಿಕೊಪ್ಪಲು: ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಡಗು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕೊಡಗು, ಮಹಿಳಾ ಮತ್ತು ಮಕ್ಕಳ ಇಲಾಖೆ ಪೊನ್ನಂಪೇಟೆ, ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ವಿರಾಜಪೇಟೆ ತಾಲೂಕು ಸಹಯೋಗದಲ್ಲಿ ಜಿಲ್ಲಾ ಮಟ್ಟದ ರಾಷ್ಟೀಯ ಸಿಕಲ್‌ಸೆಲ್(ಕುಡುಗೋಲು) ಅನಿಮಿಯ ಜಾಗೃತಿ ನಿರ್ಮೂಲನ ಕಾರ್ಯಕ್ರಮವೂ ತಿತಿಮತಿ ಸಮುದಾಯ ಭವನದಲ್ಲಿ ಪೊನ್ನಂಪೇಟೆ ತಾಲೂಕು ತಹಸೀಲ್ದಾರರಾದ ಕೆ.ಎನ್.ಮೋಹನ್‌ಕುಮಾರ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿತು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಾದ ರಣದೀಪ್ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಟಿ.ಯೋಗೇಶ್ ಉಪನಿರ್ದೇಶಕರಾದ ಪ್ರಭಾ ಅರಸ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕುಡುಗೋಲು ಕಾಯಿಲೆ ಬಗ್ಗೆ ಮೈಸೂರಿನ ಜೆಎಸ್‌ಎಸ್ ಕಾಲೇಜಿನ ಅನುವಂಶೀಯ ರೋಗತಜ್ಞೆ ಡಾ.ದೀಪಾಭಟ್ ವಿಶೇಷ ಉಪನ್ಯಾಸ ನೀಡಿದರು. ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಸತೀಶ್‌ಕುಮಾರ್, ಜಿಲ್ಲಾ ಕ್ಷಯಾ ರೋಗ ನಿಯಂತ್ರಣಾ ಅಧಿಕಾರಿಗಳಾದ ಡಾ.ಸನತ್‌ಕುಮಾರ್, ತಾಲೂಕು ವೈದ್ಯಾಧಿಕಾರಿಗಳಾದ ಡಾ.ಯತಿರಾಜ್, ಪೊನ್ನಂಪೇಟೆ ತಾಲೂಕು ಸಿಡಿಪಿಒ, ರೇಣುಕಾ ಬಿ.ಹೊಸಮನಿ, ಯೂನಿಯನ್ ಲೀಡರ್ ಸುಮನಾ, ಆಶಾ ಕಾರ್ಯಕರ್ತೆ ಸುಮಿತ್ರಾ, ಆರೋಗ್ಯಾಧಿಕಾರಿ ಶಶಿಕಾಂತ, ತಿತಿಮತಿ ಗ್ರಾಪಂ ಅಧ್ಯಕ್ಷರಾದ ಪೊನ್ನು, ಸದಸ್ಯ ರಾಜು, ಜಿಪಂ ಮಾಜಿ ಸದಸ್ಯರಾದ ಪಿ.ಆರ್.ಪಂಕಜಾ, ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ಮಣಿಕುಂಞ, ಬುಡಕಟ್ಟು ಕೃಷಿಕರ ಅಧ್ಯಕ್ಷರಾದ ಸಿದ್ದಪ್ಪ, ರಾಮ, ಉದಯ, ಉಪಾಧ್ಯಕ್ಷರಾದ ಪುಷ್ಪಾ ಸದಸ್ಯರಾದ ಸುಬ್ರಮಣಿ, ರಾಣಿ, ಗ್ರಾಮೀಣ ಅರಣ್ಯ ಸಮಿತಿಯ ಅಧ್ಯಕ್ಷರಾದ ಪಿ.ಸಿ.ರಾಮು, ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.