ಮೊದಲ ದಿನವೇ ಅನಿಮಲ್​​​ ಸಿನಿಮಾಗೆ ಭರ್ಜರಿ ಕಲೆಕ್ಷನ್​; 14 ದೊಡ್ಡ ಚಿತ್ರಗಳ ರೆಕಾರ್ಡ್​​​​ ಬ್ರೇಕ್​​..!

anfinal
Published on

ಮೊದಲ ದಿನವೇ 63 ಕೋಟಿ ರೂ.ಗಳ ಬೃಹತ್ ಕಲೆಕ್ಷನ್ ಮಾಡಿದ ಚಿತ್ರದ ಭರ್ಜರಿ ಕಲೆಕ್ಷನ್ ಸತತ ಐದನೇ ದಿನವೂ ಮುಂದುವರೆದಿದೆ. ಮೊದಲ ವಾರಾಂತ್ಯದ ನಂತರ, ಸೋಮವಾರವೂ ಚಿತ್ರ ದೊಡ್ಡ ದಾಖಲೆಯ ಕಲೆಕ್ಷನ್‌ ಮಾಡಿದ್ದು.. ಮಂಗಳವಾರವೂ ಅದೇ ವೇಗದಲ್ಲಿ ಸಾಗುತ್ತಿದೆ.

ಅನಿಮಲ್​ ಚಿತ್ರ ಸೋಮವಾರದಂದು, 43.96 ಕೋಟಿ ಕಲೆಕ್ಷನ್ ಮಾಡಿದ್ದು, ಮಂಗಳವಾರದಂದು ಅನಿಮಲ್ ಗಳಿಕೆಯಲ್ಲಿ ಕೊಂಚ ಇಳಿಕೆಯಾಗಿದೆ ಎಂಬ ಸುದ್ದಿ ಇದೆ. ವರದಿಯ ಪ್ರಕಾರ, ರಣಬೀರ್ ಕಪೂರ್ ಅವರ ಚಿತ್ರ ಮಂಗಳವಾರ 38.25 ಕೋಟಿ ರೂ. ಗಳಿಸಿದೆ.

ರಣಬೀರ್ ಕಪೂರ್ ಅವರ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಅನಿಮಲ್​​ ಎನ್ನಲಾಗುತ್ತಿದ್ದು, ಸದ್ಯ ಐದನೇ ದಿನಕ್ಕೆ ಅನಿಮಲ್ ಭಾರತವೊಂದರಲ್ಲೇ 283.74 ಕೋಟಿ ಕಲೆಕ್ಷನ್ ಮಾಡಿದೆ.

ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ಸುಮಾರು 26 ಚಿತ್ರಗಳ ದಾಖಲೆಯನ್ನು ಮುರಿದಿದ್ದ ಈ ಚಿತ್ರ ಇದೀಗ ಐದನೇ ದಿನದಲ್ಲಿ ಶಾರುಖ್ ಖಾನ್ ಅವರ ಜವಾನ್ ಸೇರಿದಂತೆ 14 ದೊಡ್ಡ ಚಿತ್ರಗಳನ್ನು ಹಿಂದಿಕ್ಕಿದೆ.

ಹಿಂದೆ ಈ ದಾಖಲೆ ಶಾರುಖ್ ಖಾನ್ ಅವರ ಚೆನ್ನೈ ಎಕ್ಸ್‌ಪ್ರೆಸ್ ಹೆಸರಿನಲ್ಲಿತ್ತು. ಈ ಚಿತ್ರ ನಾಲ್ಕನೇ ದಿನಕ್ಕೆ 424.54 ಕೋಟಿ ಕಲೆಕ್ಷನ್ ಮಾಡಿದ್ದರೆ, ಅನಿಮಲ್ 424.87 ಕೋಟಿ ಕಲೆಕ್ಷನ್ ಮಾಡಿದೆ. ಸದ್ಯ ಚೆನ್ನೈ ಎಕ್ಸ್​ಪ್ರೆಸ್​​ ಸಿನಿಮಾದ ದಾಖಲೆಯನ್ನೂ ಅನಿಮಲ್​ ಹಿಂದಿಕ್ಕಿದೆ ಎನ್ನಲಾಗುತ್ತಿದೆ.

ಮೊದಲ ದಿನವೇ 63 ಕೋಟಿ ರೂ.ಗಳ ಬೃಹತ್ ಕಲೆಕ್ಷನ್ ಮಾಡಿದ ಚಿತ್ರ ಅನಿಮಲ್‌ ರಶ್ಮಿಕಾ ಮಂದಣ್ಣ ನಟನೆಯೂ ತೆರೆಯ ಮೇಲೆ ಸುಂದರವಾಗಿ ಮೂಡಿ ಬಂದಿದೆ.

ಸದ್ಯ ಅನಿಮಲ್​ ಸಿನಿಮಾ ಎಲ್ಲೆಡೆ ಸದ್ದು ಮಾಡುತ್ತಿದ್ದು, ಬಾಕ್ಸ್ ಆಫೀಸ್ ನಲ್ಲಿ ನಿರಂತರವಾಗಿ ಮೇಲುಗೈ ಸಾಧಿಸುವ ಮೂಲಕ ಸದ್ಯ 14 ಚಿತ್ರಗಳ ರೆಕಾರ್ಡ್‌ ಬ್ರೇಕ್‌ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net