ಸೊಸೆ ಓಡಿ ಹೋಗಿ ಮದುವೆಯಾಗಿದ್ದಕ್ಕೆ ಸಿಟ್ಟು; Reception ಊಟಕ್ಕೆ ವಿಷ ಬೆರೆಸಿದ ಮಾವ, ಮುಂದೇನಾಯ್ತು ಗೊತ್ತೇ?

dk-62-677e83814b095
Published on

ಮಹಾರಾಷ್ಟ್ರ: ಮಹಾರಾಷ್ಟ್ರದ ಕೊಲ್ಹಪುರದಲ್ಲಿ ತನ್ನ ಸೊಸೆ ಮದುವೆಯ ಆರಕ್ಷತೆಗೆ(Reception) ಬಂದಿದ್ದ ಅತಿಥಿಯರ(ನೆಂಟರಿಗೆ) ಕೊಲೆ ಅಥವಾ ಮಾನ ಹರಾಜು ಹಾಕುವ ಉದ್ದೇಶದಿಂದ ಮದುವೆಗೆ ತಯಾರಿದ ಅಡುಗೆಯಲ್ಲಿ ವಿಷ ಬೆರಸಿ ಪರಾರಿಯಾದ ಘಟನೆ ನಡೆದಿದೆ. ಈ ಕುರಿತು ಪೊಲೀಸ್​ ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷ ಬೆರಸಿದ ಊಟವನ್ನು ಯಾರು ಸೇವಿಸಿಲ್ಲ. ಆದರೆ, ಕೆಲವರು ಸೇವಿಸಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆ ಅವರ ರಕ್ತದ ಮಾದರಿಯನ್ನು ಟೆಸ್ಟ್​ಗೆ ಕಳುಹಿಸಲಾಗಿದೆ. ಜೊತೆಗೆ ಅಡುಗೆಯ ಊಟದ ಸ್ಯಾಂಪಲ್ಸ್​ ಕೂಡ ಟೆಸ್ಟ್​ಗೆ ಕಳುಹಿಸಲಾಗಿದೆ. ವರದಿ ಬವರುವವರೆಗೂ ಕಾಯಬೇಕಾಗಿದೆ. ಇಲ್ಲಿನ ಉತ್ರೆ ಗ್ರಾಮದ ನಿವಾಸಿ ಮಹೇಶ್​ ಪಾಟೀಲ್​ ಆರೋಪಿ ಎಂದು ಗುರುತಿಸಲಾಗಿದೆ. ಅಡುಗೆಯಲ್ಲಿ ವಿಷ ಬೆರಸುವುದರ ಜತೆಯ ಕಲ್ಯಾಣ ಮಂಟಪ ಕಾಪೌಂಡ್​ ಗೋಡೆ ಹೊಡೆದು ಪರಾರಿಯಾಗಿದ್ದಾನೆ. ಸ್ಥಳದಲ್ಲಿದ್ದ ಕೆಲವರು ಆರೋಪಿಯನ್ನು ಹಿಡಿಯಲು ಯತ್ನಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಷ ಬೆರೆಸಲು ಕಾರಣ?

ಇತ್ತೀಚಿಗೆ ಗ್ರಾಮದ ವ್ಯಕ್ತಿಯೊಬ್ಬನೊಂದಿಗೆ ಓಡಿಹೋಗಿ ಆತನನ್ನು ಪಾಟೀಲ್​ ಸೊಸೆ ಮದುವೆಯಾಗಿದ್ದು, ಇದು ಪಾಟೀಲ್‌ಗೆ ಒಪ್ಪಿಗೆಯಾಗದ ಕಾರಣ ಮಂಗಳವಾರ ಮದುವೆ ಮಂಟಪದಲ್ಲಿ ನಡೆದ ಮದುವೆ ಆರತಕ್ಷತೆ ಸಮಾರಂಭಕ್ಕೆ ಬಂದು ಆಹಾರ ಪದಾರ್ಥಗಳಲ್ಲಿ ವಿಷ ಬೆರೆಸಿ ಪರಾರಿಯಾಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net