ಹೇರ್​ವಾಶ್ ಮಾಡಿಸಿಕೊಳ್ಳುವಾಗ ಮಾತಾಡ್ತೀರಾ? ಹಾಗಾದರೆ ಒಮ್ಮೆ ಈ ವಿಡಿಯೋ ನೋಡಿ..

hair
Published on

ಬೆಂಗಳೂರು: ಪಾರ್ಲರ್​ಗೆ ಅಥವಾ ಸೆಲೂನ್​ಗೆ ಹೋಗಿ ಹೇರ್​ ವಾಶ್ ಅಥವಾ ಹೇರ್​ ಕಟ್ ಮಾಡಿಸಿಕೊಳ್ಳುವಾಗ ಪಕ್ಕದಲ್ಲಿ ನಿಮ್ಮ ಸ್ನೇಹಿತರೇ ಇದ್ದರೆ ಏನು ಮಾಡುತ್ತೀರಿ? ಪಟ ಪಟ ಅಂತ ಮಾತಾಡ್ತೀವಿ ಎನ್ನುವವರಿದ್ದರೆ ಈ ವಿಡಿಯೋ ನೋಡಲೇಬೇಕು.

ಯುವತಿಯೊಬ್ಬಳು ಸೆಲೂನ್​ನಲ್ಲಿ ಹೇರ್​ವಾಶ್ ಮಾಡಿಸಿಕೊಳ್ಳುತ್ತಿದ್ದಾಳೆ. ಆಕೆಯ ಪಕ್ಕದಲ್ಲಿ ಆಕೆಯ ಸ್ನೇಹಿತೆಯೇ ಕುಳಿತಿದ್ದಾಳೆ. ಇಬ್ಬರು ಏನೋ ಮಾತಾಡಿಕೊಳ್ಳುತ್ತಿದ್ದಾರೆ. ಹೇರ್​ವಾಶ್ ಮಾಡಿಸಿಕೊಳ್ಳಲು ಬೇಸಿನ್ ಒಳಗೆ ತಲೆ ಇಟ್ಟುಕೊಂಡಿದ್ದ ಯುವತಿ ಸ್ನೇಹಿತೆಯೊಂದಿಗೆ ಮಾತನಾಡಲೆಂದು ಆಗಾಗ ತಲೆ ಎತ್ತುತ್ತಿದ್ದಾಳೆ. ಒಂದೆರೆಡು ಬಾರಿ ಹೇರ್​ ಡ್ರೆಸ್ಸರ್​ ಹೀಗೆ ಏಳಬೇಡಿ ಎಂದು ವಾರ್ನ್ ಮಾಡುತ್ತಾನೆ. ಸಾರಿ ಎಂದು ಕ್ಷಮೆಯಾಚಿಸುವ ಆಕೆ ಒಂದೆರೆಡು ಕ್ಷಣ ಸುಮ್ಮನಾಗುತ್ತಾಳೆ. ಅದಾದ ಮೇಲೆ ಮತ್ತೆ ಅದೇ ಕಥೆ ಮುಂದುವರಿಸುತ್ತಾಳೆ.

ನೋಡುವಷ್ಟು ಸಮಯ ನೋಡಿ ಸಿಟ್ಟಿಗೆದ್ದ ಹೇರ್​ ಡ್ರೆಸ್ಸರ್​ ಕೊನೆಗೊಂದು ಗಟ್ಟಿ ನಿರ್ಧಾರ ಮಾಡಿಯೇಬಿಡುತ್ತಾನೆ. ಯುವತಿ ಮತ್ತೆ ಮಾತಿಗಿಳಿದಾಗ ಆಕೆಯ ಕೂದಲಿಗೆ ಹಾಕುತ್ತಿದ್ದ ನೀರನ್ನು ಮುಖಕ್ಕೂ ಸಿಟ್ಟಿನಿಂದ ಹಾಕುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾವಿರಾರು ಜನರು ವಿಡಿಯೋಗೆ ಪ್ರತಿಕ್ರಿಯಿಸಲಾರಂಭಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net