More

    ಬರ್ಲಿನ್​ನಲ್ಲಿ ಹೆಂಗಸರ ಒಳ ಉಡುಪು ತೊಟ್ಟ ಗಂಡಸರು! ಕಾರಣವೇನು ಗೊತ್ತಾ?

    ಬರ್ಲಿನ್: ಲಿಂಗ ಸಮಾನತೆ ಬಗ್ಗೆ ಎಲ್ಲೆಡೆ ಮಾತನಾಡುತ್ತಲೇ ಇರುತ್ತೇವೆ. ಆದರೆ ಸಮಾನತೆ ಎಷ್ಟರ ಮಟ್ಟಿಗೆ ಸಿಕ್ಕಿದೆ ಎನ್ನುವುದು ಮಾತ್ರ ಇನ್ನೂ ಉತ್ತರ ಸಿಗದ ಪ್ರಶ್ನೆಯೇ ಆಗಿದೆ. ಈಗಲೂ ಲಿಂಗ ಭೇದ ಹಲವು ಕಡೆಗಳಲ್ಲಿ ನಡೆಯುತ್ತಿರುವುದನ್ನು ಗಮನಿಸಬಹುದಾಗಿದೆ. ಅದೇ ರೀತಿಯ ಲಿಂಗಭೇದ ಪ್ರಕರಣವೊಂದರಿಂದಾಗಿ ಸಿಟ್ಟಿಗೆದ್ದ ಸಾರ್ವಜನಿಕರು ವಿಶೇಷ ರೀತಿಯಲ್ಲಿ ಪ್ರತಿಭಟನೆ ನಡೆಸಿರುವ ಘಟನೆ ಜರ್ಮನಿಯ ಬರ್ಲಿನ್​ನಲ್ಲಿ ನಡೆದಿದೆ.

    ಬರ್ಲಿನ್​ನ ವಾಟರ್ ಪಾರ್ಕ್​ಗೆ ಇತ್ತೀಚೆಗೆ ಮಹಿಳೆಯೊಬ್ಬಳು ಹೋಗಿ ಸನ್​ಬಾತ್ ಮಾಡಿದ್ದಳು. ಆಕೆ ತನ್ನ ಟಾಪ್ ಕಳಚಿಕೊಂಡು ಅರೆನಗ್ನವಾಗಿ ಸನ್​ಬಾತ್ ಮಾಡುತ್ತಿದ್ದಳಂತೆ. ಆ ವೇಳೆ ಅಲ್ಲಿದ್ದ ಪೊಲೀಸರು ಆಕೆಗೆ ಟಾಪ್​ ಹಾಕಿಕೊಳ್ಳಿ ಎಂದು ಹೇಳಿದರಂತೆ. ಅದಕ್ಕೆ ಆಕೆ ಒಪ್ಪಿಲ್ಲ. ಪುರುಷರೂ ಕೂಡ ಶರ್ಟ್, ಟಿ ಶರ್ಟ್ ಧರಿಸದೆಯೇ ಸನ್​ಬಾತ್ ಮಾಡುತ್ತಾರೆ. ನಾನೇಕೆ ಮಾಡಬಾರದು ಎಂದು ಪ್ರಶ್ನಿಸಿದ್ದಾಳೆ. ಅದೇ ಕಾರಣಕ್ಕೆ ಅವಳನ್ನು ಪಾರ್ಕ್​ನ ಹೊರಗೆ ಹಾಕಲಾಗಿದೆ. ಈ ವಿಚಾರ ಎಲ್ಲೆಡೆ ಹರಿದಾಡಿದ್ದು, ಜನ ಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

    ಈ ವಿಚಾರವಾಗಿ ಜುಲೈ 10ರ ಮಧ್ಯಾಹ್ನ ಬರ್ಲಿನ್​ನಲ್ಲಿ ನೂರಾರು ಮಂದಿ ಒಟ್ಟಾಗಿ ಪ್ರತಿಭಟನೆ ನಡೆಸಿದ್ದಾರೆ. ಮಹಿಳೆಯರು ಟಾಪ್​ ಹಾಕದೆ ಅರೆ ನಗ್ನವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೆ, ಪುರುಷರು ಬ್ರಾ ತೊಟ್ಟು ಸೈಕಲ್ ಸವಾರಿ ಮಾಡಿದ್ದಾರೆ. ಮಹಿಳೆಯರು ತಮ್ಮ ದೇಹದ ಮೇಲೆ ‘ಮೈ ಬಾಡಿ, ಮೈ ಚಾಯ್ಸ್’ ಸೇರಿ ಅನೇಕ ರೀತಿಯ ಸ್ಲೋಗನ್ ಬರೆದುಕೊಂಡು ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್)

    ಕರೊನಾದಿಂದಾಗಿ ಸತ್ತವರ ಸಂಖ್ಯೆಯನ್ನೇ ಸುಳ್ಳು ಹೇಳ್ತಿದೆ ಸರ್ಕಾರ: ಅಖಿಲೇಶ್ ಯಾದವ್ ಆರೋಪ

    ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ತವರು ರಾಜ್ಯದ ಜನರಿಗೆ ಶುಭ ಸುದ್ದಿ ನೀಡಿದ ಜ್ಯೋತಿರಾದಿತ್ಯ ಸಿಂಧ್ಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts