ಆರ್ಡರ್​​​​ ಕ್ಯಾನ್ಸಲ್​ ಮಾಡಿದ್ದಕ್ಕೆ ಸಿಟ್ಟು; ರೆಸ್ಟೋರೆಂಟ್​ ಸಿಬ್ಬಂದಿ ಮೇಲೆ ಡೆಲಿವರಿ ಬಾಯ್​ ಹಲ್ಲೆ

delivery boy
Published on

ಪೆನಾಂಗ್:​ ರೆಸ್ಟೋರೆಂಟ್​ ಸಿಬ್ಬಂದಿ ತನಗೆ ನೀಡಿದ್ದ ಆರ್ಡರ್​ ಕ್ಯಾನ್ಸಲ್​ ಮಾಡಿ ಬೇರೆ ಒಬ್ಬರಿಗೆ ನೀಡಿದ್ದಕ್ಕೆ ಕುಪಿತಗೊಂಡ ಡೆಲವರಿ ಬಾಯ್​ ಅಲ್ಲಿನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಮಲೇಶಿಯಾದ ಪೆನಾಂಗ್​ನಲ್ಲಿ ನಡೆದಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಪೆನಾಂಗ್​ನ ಫ್ಯೂಮಿ ಹನಿ ಹೌಸ್​ ಎಂಬ ಕೆಫೆಯಲ್ಲಿ ನಡೆದಿದ್ದು ಡೆಲಿವರ್​ ಬಾಯ್​ನ ನಡತೆ ಸಾಕಷ್ಟು ಖಂಡನೆ ವ್ಯಕ್ತವಾಗಿದೆ.

ಫುಡ್​ಪಾಂಡಾ ಅಪ್ಲಿಕೇಷನ್​ ಮೂಲಕ ಗ್ರಾಹಕರೊಬ್ಬರು ಫ್ಯೂಮಿ ಕೆಫೆಯಲ್ಲಿ ಆಹಾರವನ್ನು ಆರ್ಡರ್​ ಮಾಡಿದ್ದಾರೆ. ಈ ವೇಳೆ ರೆಸ್ಟೋರೆಂಟ್​ನ ಸಿಬ್ಬಂದಿ ತಮ್ಮ ಆರ್ಡರ್​​ ಅನ್ನು ರೆಡಿ ಮಾಡಿ ಡೆಲಿವರಿ ಬಾಯ್​ಘಾಗಿ ಸುಮಾರು 30 ನಿಮಿಷಗಳ ಕಾಲ ಕಾದಿದ್ದಾರೆ. ಸರಿಯಾದ ಸಮಯಕ್ಕೆ ಬಾರದ ಕಾರಣ ಬೇರೊಬ್ಬ ಡೆಲಿವರಿ ಬಾಯ್​ಗೆ ಆರ್ಡರ್​ ವರ್ಗಾಯಿಸಿದ್ದಾರೆ.

delivery boy attack

ಆರ್ಡರ್​ ಸ್ವೀಕರಿಸಲು 45 ನಿಮಿಷಗಳ ಬಳಿಕ ಬಂದ ಡೆಲಿವರಿ ಬಾಯ್​ಗೆ ರೆಸ್ಟೋರೆಂಟ್​ ಸಿಬ್ಬಂದಿ ತಡವಾಗಿ ಬಂದ ಕಾರಣ ತನಗೆ ನೀಡಿದ್ದ ಆರ್ಡರ್​ ಕ್ಯಾನ್ಸಲ್​ ಮಾಡಿ ಬೇರೊಬ್ಬರಿಗೆ ನೀಡಿದ್ಧಾಗಿ ಹೇಳಿದ್ಧಾರೆ. ಇದಕ್ಕೆ ಕುಪಿತಗೊಂಡ ಆತ ಟೇಬಲ್​ ಮೇಲಿದ್ದ ವಸ್ತುವಿನಿಂದ ಕೆಫೆ ಸಿಬ್ಬಂದಿ ಮೇಲೆ ಹಲ್ಲೆ ಮಾಡುತ್ತಾನೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಫ್ಯೂಮಿ ಕೆಫೆ ಸಿಬ್ಬಂದಿ ಸರಿಯಾದ ಸಮಯಕ್ಕೆ ಫುಡ್​ ಡೆಲವರಿ ಆಗಲಿ ಎಂಬ ಕಾರಣಕ್ಕೆ ನಾವು ಡೆಲವರಿ ಬಾಯ್​ ಅನ್ನು ಬದಲಾಯಿಸಿದ್ದೇವು. ಈ ಬಗ್ಗೆ ಫುಡ್​ಪಾಂಡಾ ಹಾಗೂ ಪೊಲಿಸರಿಗೆ ದುರನ್ನು ನೀಡಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net