

ಅಲ್ಜೀರಿಯಾ: ರಂಜಾನ್ ಮಂತ್ರ ಪಠಣ ಮಾಡುತ್ತಿದ್ದ ಇಮಾಮ್ ಮೇಲೆ ಬೆಕ್ಕು ಹಾರಿರುವ ಘಟನೆ ಅಲ್ಜೀರಿಯಾದಲ್ಲಿ ನಡೆದಿದೆ.ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇಮಾಮ್ ಮಂತ್ರ ಪಠಣ ಮಾಡುತ್ತಿದ್ದ ವೇಳೆ ಬೆಕ್ಕು ಮೈ ಮೇಲೆ ಹಾರಿದಾಗ ವಿಚಲಿತರಾಗದೆ ಬೆಕ್ಕನ್ನು ಮುದ್ದಿಸುತ್ತ ಮಂತ್ರವನ್ನು ಪಠಣ ಮಾಡುತ್ತಿರುವುದು ಕಂಡು ಬರುತ್ತದೆ.
ಇದನ್ನೂ ಓದಿ: ರಿಷಭ್ ನಹೀ ಹೈ ತೋ ನಸೀಮ್ ಹೈ; ಬಾಲಿವುಡ್ ನಟಿ ಕಾಲೆಳೆದ ನೆಟ್ಟಿಗರು!
ಸದ್ಯ ವೈರಲ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ 5ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು ನೆಟ್ಟಿಗರು ವಿಶಿಷ್ಟ ಶೀರ್ಷಿಕೆಯನ್ನು ಕೊಡುತ್ತಿದ್ಧಾರೆ.
ದೇವರ ಮಹಿಮೆ ಪ್ರಾಣಿಗಳು ಸಹ ದೇವರ ಮಾತುಗಳಿಗೆ ಹೆದರುತ್ತವೆ. ಈ ವಿಡಿಯೋ ಹೃದಯಸ್ಪರ್ಶಿಯಾಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ಧಾರೆ.
https://www.vijayavani.net/satyendar-jain-denied-bail-in-money-laundering-case/