ಅಂಗನವಾಡಿ ಕಾರ್ಯಕರ್ತೆ ಆತ್ಮಹತ್ಯೆ

SUICIDE
Published on

ನರಗುಂದ: ಮಗಳು ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ, ಮದುವೆಯಾದಳೆಂದು ಮನನೊಂದ ಅಂಗನವಾಡಿ ಕಾರ್ಯಕರ್ತೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟಣೆ ತಾಲೂಕಿನ ಶಿರೋಳ ಗ್ರಾಮದಲ್ಲಿ ಬುಧವಾರ ನಡೆದಿದೆ.

ಶಿರೋಳದ ಅಂಗನವಾಡಿ ಕೇಂದ್ರ ಸಂಖ್ಯೆ-57ರ ಕಾರ್ಯಕರ್ತೆ ಸುನಿತಾ (ದಾಕ್ಷಾಯಿಣಿ) ವೀರಣ್ಣ ನಾಯಕವಾಡಿ (48) ಆತ್ಮಹತ್ಯೆಗೆ ಶರಣಾದ ಮಹಿಳೆ.

ಮೃತ ಅಂಗನವಾಡಿ ಕಾರ್ಯಕರ್ತೆಯ ಮಗಳು ನಾಲ್ಕು ತಿಂಗಳ ಹಿಂದೆ ಶಿರೋಳ ಗ್ರಾಮದಲ್ಲಿಯೇ ನೆಲೆಸಿದ್ದ ಪರಯ್ಯ ಹಿರೇಮಠ ಎಂಬುವರನ್ನು ಪ್ರೀತಿಸಿ, ಮನೆಬಿಟ್ಟು ಓಡಿಹೋಗಿ ಮದುವೆಯಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದರು.

ಇದನ್ನೆ ಮನಸಿಗೆ ಹಚ್ಚಿಕೊಂಡಿದ್ದ ಸುನಿತಾ ಶಿರೋಳ ಗ್ರಾಮದ ಆಶ್ರಯ ಪ್ಲಾಟ್‌ನಲ್ಲಿದ್ದ ತನ್ನ ಅಕ್ಕನ ಮನೆಯ ಮುಂದಿನ ಕಬ್ಬಿಣ ಪೈಪ್‌ಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಕುರಿತು ಮೃತಳ ಮಗ ಯುವರಾಜ ನಾಯಕವಾಡಿ ದೂರು ನೀಡಿದ್ದು, ಸಿಪಿಐ ಮಲ್ಲಯ್ಯ ಮಠಪತಿ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net