ರೋಗ ತಡೆಗೆ ಲಸಿಕೆ ಹಾಕಿಸಿ

Untitled design(5)
ಅಳವಂಡಿ ಅಂಗನವಾಡಿ ಕೇಂದ್ರದಲ್ಲಿ ಮಿಷನ್ ಇಂದ್ರಧನುಷ್ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ, ಪ್ರಮುಖರಾದ ಗುರುಬಸವರಾಜ, ಅನ್ವರ, ಹನುಮಂತ, ಇಸ್ಮಾಯಿಲ್, ರವೀಂದ್ರ, ನಾಗರಾಜ, ಅಂಗನವಾಡಿ ಕಾರ್ಯಕರ್ತೆ ಮರಿಬಸಮ್ಮ ಇನ್ನಿತರರಿದ್ದರು.
Published on

ಅಳವಂಡಿ: ಮಕ್ಕಳಿಗೆ ರೋಗಗಳಿಂದ ರಕ್ಷಿಸಲು ಲಸಿಕೆಗಳನ್ನು ತಪ್ಪದೆ ಹಾಕಿಸಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಂಕ್ರಮ್ಮ ಜೋಗಿನ ತಿಳಿಸಿದರು.

ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಆಶ್ರಯದಲ್ಲಿ ಮಿಷನ್ ಇಂದ್ರಧನುಷ್ 5.0 ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು.

ಲಸಿಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಳ

ಆರೋಗ್ಯ ನೀರಿಕ್ಷಣಾಧಿಕಾರಿ ರವೀಂದ್ರ ಕಮ್ಮಾರ ಮಾತನಾಡಿ, ಲಸಿಕೆ ಹಾಕಿಸಿಕೊಳ್ಳದ ಮಕ್ಕಳನ್ನು ಗುರುತಿಸಲಾಗಿದೆ. ಅವರಿಗೆ ಕಡ್ಡಾಯವಾಗಿ ಲಸಿಕೆ ಹಾಕಲಾಗುವುದು. ಲಸಿಕಾ ಅಭಿಯಾನ ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲನೇ ಹಂತ ಆಗಷ್ಟ್ 7 ರಿಂದ 12ರವರೆಗೂ ನಡೆಯಲಿದೆ. ಎಲ್ಲ ತಾಯಂದಿರು ಅಂಗನವಾಡಿ, ಆರೋಗ್ಯ ಕೇಂದ್ರಗಳಲ್ಲಿನ ಲಸಿಕಾ ಕೇಂದ್ರಕ್ಕೆ ಕರೆ ತಂದು ಲಸಿಕೆ ಹಾಕಿಸಬೇಕು. ಇದು ಮಕ್ಕಳರೋಗ ನಿರೋಧಕ ಶಕ್ತಿ ಹೆಚ್ಚಿಸಲಿದೆ ಎಂದರು.

ಶಿಶು ಅಭಿವೃದ್ದಿ ಅಧಿಕಾರಿ ರೆಹಮತ್ ಬೆಣಕಲ್, ಪ್ರಮುಖರಾದ ಗುರುಬಸವರಾಜ ಹಳ್ಳಿಕೇರಿ, ಅನ್ವರ ಗಡಾದ, ಹನುಮಂತ ಮೂಲಿಮನಿ, ಇಸ್ಮಾಯಿಲ್ ಕವಲೂರು, ಅಶೋಕ ಬಂಡಿ, ಆರೋಗ್ಯ ಇಲಾಖೆಯ ಸಾವಿತ್ರಿ ಹಂಚಿನಾಳ, ನಾಗರಾಜ, ಅಂಗನವಾಡಿ ಕಾರ್ಯಕರ್ತೆಯರಾದ ಮರಿಬಸಮ್ಮ ಕರ್ಕಿಹಳ್ಳಿ, ಅಕ್ಕಮ್ಮ ಕರಡಿ, ಲಲಿತಾ ಕಲ್ಗುಡಿ, ಪುಷ್ಪಾವತಿ, ನಾಗರತ್ನ, ಸಹಾಯಕಿ ವಿಜಯಲಕ್ಷ್ಮೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net