VIDEO| ಪೊಲೀಸರಿಗೆ ಮಾಹಿತಿ ನೀಡಿದ ಅಂಗನವಾಡಿ ಕಾರ್ಯಕರ್ತೆಗೆ ಕೊಲೆ ಬೆದರಿಕೆ!

complent
Published on

ಹನೂರು: ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಸಮೀಕ್ಷೆ ಮಾಡುತ್ತಿದ್ದ ಅಂಗನವಾಡಿ ಕಾರ್ಯಕರ್ತೆಗೆ ಪುಂಡರ ಗುಂಪು ಕೊಲೆ ಬೆದರಿಕೆ ಹಾಕಿದೆ.

ಕೊಲೆ ಬೆದರಿಕೆ ಹಾಕಿದ ಪುಂಡರ ವಿರುದ್ಧ ಅಂಗನವಾಡಿ ಕಾರ್ಯಕರ್ತೆ ಕವಿತಾ ಎಂಬುವವರು ಶುಕ್ರವಾರ ಪೊಲೀಸರಿಗೆ ದೂರು ನೀಡಿದ್ದಾರೆ.

ಏನು ನಡೆಯಿತು?: ತಾಲೂಕಿನ ಶಾಗ್ಯ ಗ್ರಾಮದಲ್ಲಿ ಕವಿತಾ ಸಮೀಕ್ಷೆ ನಡೆಸುತ್ತಿದ್ದರು. ಈ ವೇಳೆ ಪುಂಡರ ಗುಂಪು ಜೂಜಾಟದಲ್ಲಿ ತೊಡಗಿತ್ತು. ಕವಿತಾ ಕೂಡಲೇ ಪೋಲಿಸರಿಗೆ ಈ ಮಾಹಿತಿ ನೀಡಿದ್ದರು. ಪೊಲೀಸರು ಗ್ರಾಮಕ್ಕೆ ಆಗಮಿಸಿ ಅವರನ್ನು ಬಂಧಿಸಿ ದಂಡ ಕಟ್ಟಿಸಿಕೊಂಡು ಬಿಡುಗಡೆ ಮಾಡಿದ್ದರು.

ಇದರಿಂದ ಕೋಪಗೊಂಡ ಪುಂಡರು ಕವಿತಾ ಅವರಿಗೆ ಕೊಲೆ ಬೆದರಿಕೆ ಹಾಕಿದ್ದರು. ಅಲ್ಲದೆ ಕವಿತಾ ಅವರ ಪತಿ ಸಿದ್ದಪ್ಪ ಅವರೊಗೆ ದೂರುನೀಡಿ ಪತ್ನಿ ಇನ್ನು ಮುಂದೆ ನಮ್ಮ ವಿಚಾರಕ್ಕೆ ಬರದಂತೆ ಮಾಡಬೇಕು ಎಂದಿದ್ದರು.
ಮನೆಗೆ ತೆರಳಿದ ಪತಿ ಸಿದ್ದಪ್ಪ ಪತ್ನಿ ಕವಿತಾ ಅವರ ಮೇಲೆ ಹಲ್ಲೆ ಕೂಡ ನಡೆಸಿದ್ದರು. ಇದರಿಂದ ನೊಂದ ಕವಿತಾ ಠಾಣೆಗೆ ತೆರಳಿ ಪತಿ ಹಾಗೂ ಜೂಜುಕೋರರ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net