More

    ಲಾಕ್​ಡೌನ್​ ಮಧ್ಯೆ ಒಂದೊಳ್ಳೆ ಸುದ್ದಿ; ಎಲ್​ಪಿಜಿ ಸಿಲೆಂಡರ್​ ಬೆಲೆಯಲ್ಲಿ ಭರ್ಜರಿ ಕಡಿತ..ಗ್ರಾಹಕರು ನಿರಾಳ…

    ನವದೆಹಲಿ: ಈ ಲಾಕ್​ಡೌನ್​ ಸಂದರ್ಭದಲ್ಲಿ ಮಧ್ಯಮ ವರ್ಗದವರಿಗೆ ಒಂದು ಸಿಹಿಸುದ್ದಿ ಸಿಕ್ಕಿದೆ. ಅದೇನೆಂದರೆ ಸಬ್ಸಿಡಿ ರಹಿತ ಎಲ್​ಪಿಜಿ ಸಿಲೆಂಡರ್​​ಗಳ ಬೆಲೆಯಲ್ಲಿ ಕಡಿತ ಉಂಟಾಗಿದೆ.

    ಬೆಂಗಳೂರಿನಲ್ಲಿ ಇಂದು ಸಬ್ಸಿಡಿ ರಹಿತ ಎಲ್​ಪಿಜಿ ಸಿಲೆಂಡರ್​ ಬೆಲೆ 585 ರೂ. ಆಗಿದೆ. ಏಪ್ರಿಲ್​ನಲ್ಲಿ ಇದು 744 ರೂ. ಇತ್ತು. ಹಾಗೇ ದೆಹಲಿಯಲ್ಲಿ ಪ್ರತಿ ಯುನಿಟ್​ಗೆ 162.50 ರೂ.ಕಡಿತ ಆಗಿದೆ. ಅಂದರೆ 14.2 ಕೆಜಿ ಸಬ್ಸಿಡಿ ರಹಿತ ಗ್ಯಾಸ್ ಸಿಲೆಂಡರ್​ ಬೆಲೆ 744 ರೂಪಾಯಿಯಿಂದ 584 ರೂ.ಗೆ ಇಳಿದಿದೆ.

    ಹಾಗೇ ಮುಂಬೈನಲ್ಲಿ ಈ ಮೊದಲು 14.2 ಕೆಜಿ ಸಿಲೆಂಡರ್​ಗೆ 714.50 ರೂ. ಇತ್ತು. ಅದೀಗ 579 ರೂ.ದಷ್ಟಾಗಿದೆ. ಕೋಲ್ಕತ್ತದಲ್ಲಿ ಈ ಮೊದಲಿದ್ದ ಬೆಲೆಯಲ್ಲಿ 190 ರೂ. ಕಟ್​ ಮಾಡಲಾಗಿದ್ದು, 584 ರೂ. ನಿಗದಿಯಾಗಿದೆ. ಹಾಗೇ ಚೆನ್ನೈನಲ್ಲಿ ಎಲ್​ಪಿಜಿ ಸಿಲೆಂಡರ್​ ಬೆಲೆ 569ರೂ.ಗೆ ಇಳಿದಿದೆ.

    ಎಲ್​ಪಿಜಿ ಸಿಲೆಂಡರ್​ ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನ ಪರಿಷ್ಕತಗೊಳಿಸಲಾಗುತ್ತದೆ. ಕಳೆದ ಎರಡು ತಿಂಗಳುಗಳಿಂದ ಎಲ್​ಪಿಜಿ ಸಿಲೆಂಡರ್​ ಬೆಲೆಯಲ್ಲಿ ಕಡಿತ ಆಗುತ್ತಿದೆ. (ಏಜೆನ್ಸೀಸ್​)

    ಸೆನ್ಸೆಕ್ಸ್​ 900ಕ್ಕೂ ಹೆಚ್ಚು ಅಂಶ ಏರಿಕೆ, ನಿಫ್ಟಿ 9,800ರ ಮಟ್ಟಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts