More

    ಸೆನ್ಸೆಕ್ಸ್​ 900ಕ್ಕೂ ಹೆಚ್ಚು ಅಂಶ ಏರಿಕೆ, ನಿಫ್ಟಿ 9,800ರ ಮಟ್ಟಕ್ಕೆ

    ಮುಂಬೈ: ಭಾರತದ ಷೇರುಪೇಟೆಯ ಗುರುವಾರದ ಆರಂಭಿಕ ವಹಿವಾಟಿನಲ್ಲಿ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ 900ಕ್ಕೂ ಹೆಚ್ಚು ಅಂಶ ಏರಿಕೆಯಾಗಿದರೆ, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ 9,800ರ ಮಟ್ಟಕ್ಕೆ ಏರಿಕೆಯಾಗಿದೆ.

    ಗುರುವಾರ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್​ 33,615.85ರಲ್ಲಿ ಇದ್ದಾಗ ಶೇಕಡ 2.74 ಅಂಶ ಏರಿಕೆಯಾಗಿ 33,640.73ರ ಗರಿಷ್ಠ ಏರಿಕೆ ತೋರಿಸಿತ್ತು. ಇದೇ ರೀತಿ, ನಿಫ್ಟಿ ಶೇಕಡ 2.59 ಏರಿಕೆ ತೋರಿಸಿ 9,800.55 ರಲ್ಲಿ ವಹಿವಾಟು ಮುಂದುವರಿಸಿತ್ತು.

    ಸೆನ್ಸೆಕ್ಸ್ ಪಟ್ಟಿಯಲ್ಲಿ ಮಾರುತಿ ಟಾಪ್ ಗೇನರ್ ಆಗಿದ್ದು, ಈ ಕಂಪನಿಯ ಷೇರುಗಳು ಶೇಕಡ 7 ಏರಿಕೆ ಕಂಡಿವೆ. ಇದೇ ರೀತಿ ಎಂಆ್ಯಂಡ್ಎಂ, ಐಸಿಐಸಿಐ ಬ್ಯಾಂಕ್​, ಇನ್​ಫೋಸಿಸ್​, ಟಾಟಾ ಸ್ಟೀಲ್​, ಬಜಾಜ್ ಆಟೋ, ಏಕ್ಸಿಸ್​ ಬ್ಯಾಂಕ್​, ಬಜಾಜ್ ಫೈನಾನ್ಸ್​ ಷೇರುಗಳು ಲಾಭಗಳಿಸಿವೆ.

    ರಿಲಯನ್ಸ್ ಇಂಡಸ್ಟೀಸ್​, ಎಚ್​ಯುಎಲ್​, ಟೆಕ್​ ಮಹೀಂದ್ರಾ ಕಂಪನಿಗಳ ಆದಾಯಕ್ಕೆ ಸಂಬಂಧಿಸಿದ ಘೋಷಣೆಗೆ ಮುಂಚಿತವಾಗಿ ಲಾಭಾಂಶ ತೋರಿಸಿವೆ. ಇನ್ನೊಂದೆಡೆ ಸನ್​ ಫಾರ್ಮಾ ಕಂಪನಿ ಷೇರು ನಷ್ಟ ಅನುಭವಿಸಿದೆ. ಈ ಹಿಂದಿನ ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 605.64 ಅಂಶ ಏರಿಕೆ ತೋರಿ 32,720.16ರಲ್ಲೂ, ನಿಫ್ಟಿ 172.45 ಅಂಶ ಏರಿಕೆ ತೋರಿಸಿ 9,553.35ರಲ್ಲೂ ಮುಕ್ತಾಯಗೊಂಡಿದ್ದವು.

    ಷೇರುಪೇಟೆಯ ಬುಧವಾರದ ತಾತ್ಕಾಲಿಕ ಡೇಟಾ ಪ್ರಕಾರ, ಫಾರಿನ್ ಪೋರ್ಟ್​ಫೋಲಿಯೋ ಇನ್​ವೆಸ್ಟರ್ಸ್​ 722.08 ಕೋಟಿ ರೂಪಾಯಿ ಮೌಲ್ಯದ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಿದ್ದಾರೆ.(ಏಜೆನ್ಸೀಸ್)

    ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್​ 400ಕ್ಕೂ ಹೆಚ್ಚು ಅಂಶ ಏರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts