ನಮ್ಮ ಬೇಡಿಕೆಗಳನ್ನೂ ಪೂರೈಸಿ! ಅಂಗನವಾಡಿ ಕಾರ್ಯಕರ್ತೆಯರಿಂದ ಹೋರಾಟ…

11072022 Koppal Anganawadi workers protest
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಅನ್ನಭಾಗ್ಯ ಅಕ್ಕಿ ಟೆನ್ಷನ್ ಹಾಗೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಸರ್ಕಸ್‌ನಲ್ಲಿರುವ ಸರ್ಕಾರಕ್ಕೆ ಮತ್ತೊಂದು ಸವಾಲು ಎದುರಾಗಿದ್ದು ಇದೀಗ ಅಂಗನವಾಡಿ ಕಾರ್ಯಕರ್ತೆಯರು ಹೋರಾಟಕ್ಕೆ ಇಳಿದಿದ್ದಾರೆ.

ಶೀಘ್ರವಾಗಿ ಬೇಡಿಕೆಗಳನ್ನು ಪೂರೈಸುವಂತೆ ಆಗ್ರಹಿಸುತ್ತಿರುವ ಕಾರ್ಯಕರ್ತೆಯರು‌ ಇಂದು (ಜೂ.27) ಹೋರಾಟಕ್ಕೆ ಧುಮುಕುವುದಾಗಿ ನಿರ್ಧರಿಸಿದಂತಿದೆ. ಇಂದು ಬೆಳಗ್ಗೆ 11ಗಂಟೆ‌ಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಶುರುವಾಗಲಿದೆ ಎನ್ನಲಾಗಿದೆ.

ಸರ್ಕಾರ ಈ ಹಿಂದೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗೌರವ ಧನ ಹೆಚ್ಚಳ ಮಾಡುವುದಾಗಿ ಹೇಳಿತ್ತು. ಅದಲ್ಲದೇ ಅಂಗನವಾಡಿ ಕಾರ್ಯರ್ತೆಯರು ಹಾಗೂ ಸಹಾಯಕಿಯರು ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ನೀಡಿದ್ದ 6ನೇ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಲು ಆಗ್ರಹಿಸುತ್ತಿದ್ದಾರೆ.

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು & ಸಹಾಯಕಿಯರ ಫೆಡರೇಶನ್ (AITUC) ನಿಂದ ಹೋರಾಟ ನಡೆಯುತ್ತಿದ್ದು ಕಾರ್ಯಕರ್ತೆಯರ, ಸಹಾಯಕಿಯರ ಬೇಡಿಕೆಗಳು ಹೀಗಿದೆ:

ಕಾರ್ಯಕರ್ತೆಯರ ಬೇಡಿಕೆ ಏನೇನು?

  1. ಗೌರವಧನ ಹೆಚ್ಚಳ ಮಾಡುವ ಭರವಸೆ ಶೀಘ್ರದಲ್ಲಿಯೇ ಅನುಷ್ಠಾನ ಮಾಡಬೇಕು
  2. ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ಸಹಾಯಧನ ನೀಡಬೇಕು
  3. ಸಹಾಯಕಿಯರಿಗೆ ಗೌರವಧನವನ್ನು 10 ಸಾವಿರ ರೂಪಾಯಿ ನೀಡುವ ಭರವಸೆ ಜಾರಿ ಮಾಡಿ
  4. ಕಾರ್ಯಕರ್ತೆಯರಿಗೆ ನೀಡಿದ್ದ ಮೊಬೈಲ್‌ಗಳು ಕಳಪೆ ಗುಣಮಟ್ಟದ್ದಾಗಿದ್ದು ಹಾಳಾಗಿವೆ. ಆದ್ದರಿಂದ ಹೊಸ ಮೊಬೈಲ್‌ ಅಥವಾ ಮಿನಿ ಟ್ಯಾಬ್‌ ನೀಡಬೇಕು.
  5. ಅಂಗನವಾಡಿ ಕಾರ್ಯಕರ್ತೆಯರಿಗೆ ಪಿಂಚಣಿ ಸೌಕರ್ಯವಿಲ್ಲ ಹಾಗಾಗಿ ಅವರು ಸೇವಾ ನಿವೃತ್ತಿ ಹೊಂದಿದರೆ ಅಥವಾ ನಿಧನರಾದರೆ, ₹3 ಲಕ್ಷ ಹಾಗೂ ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ₹2 ಲಕ್ಷ ನೀಡಬೇಕು.
  6. ಗೃಹಜ್ಯೋತಿ ಯೋಜನೆ ಅನುಷ್ಠಾನಕ್ಕೂ ಸಹಕರಿಸುವಂತೆ ಒತ್ತಡ ಹೆರಲಾಗುತ್ತಿದ್ದು, ಈ ಕ್ರಮವನ್ನು ಕೈಬಿಡಬೇಕು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net