More

    ಹೀಗಾಗುತ್ತೆ ನೋಡಿ ಸರಣಿ ಕಳ್ಳತನ ಮಾಡುತ್ತಿದ್ದವರು ಗ್ರಾಮಸ್ಥರ ಕೈಗೆ ಸಿಕ್ಕಾಗ…

    ಆನೇಕಲ್: ಪ್ರತಿದಿನವೂ ಕಳ್ಳತನ ಮಾಡುತ್ತಾ ಗ್ರಾಮಸ್ಥರ ನಿದ್ದೆಗೆಡಿಸುತ್ತಿದ್ದವರು ಒಂದು ದಿನ ಜನರ ಕೈಗೆ ಸಿಕ್ಕಾಗ ಏನಾಗಬಹುದು? ಅದಕ್ಕೆ ಈ ಪ್ರಕರಣವೇ ಉತ್ತಮ ಉದಾಹರಣೆ.

    ಈ ಕಳ್ಳರು ಸರಣಿಯಾಗಿ ಕಳ್ಳತನ ಮಾಡುತ್ತಾ ಗ್ರಾಮಸ್ಥರು ನಿದ್ದೆಗೆಡಿಸಿದ್ದರು. ಆದರೆ ನಿನ್ನೆ ರಾತ್ರಿ ಮಾತ್ರ ಕಳ್ಳತನ ಮಾಡುವಾಗ ಕಳ್ಳನೊಬ್ಬ ಸಿಕ್ಕಿಬಿದ್ದಿದ್ದಾನೆ. ಈ ಸಂದರ್ಭ ಗ್ರಾಮಸ್ಥರು ಸೇರಿ ಕಳ್ಳನಿಗೆ ಉಚಿತವಾಗಿ ತಮ್ಮದೂ ಒಂದಿರಲಿ ಎಂದು ಗೂಸಾ ನೀಡಿದ್ದಾರೆ!

    ಈ ಘಟನೆ ಆನೇಕಲ್ ಠಾಣಾ ವ್ಯಾಪ್ತಿಯ ಕುವೆಂಪು ನಗರದಲ್ಲಿ ನಡೆದಿದೆ. ಈ ಗ್ಯಾಂಗ್, ರಾತ್ರಿ ವೇಳೆಯಲ್ಲಿ ಹೊಂಚು ಹಾಕಿ ಬೈಕುಗಳನ್ನ ಕಳ್ಳತನ ಮಾಡುತ್ತಿದ್ದರು. ಗ್ರಾಮಸ್ಥರು ಪೋಲೀಸ್ ಠಾಣೆಗೆ ದೂರು ನೀಡಿದರೂ ಕಳ್ಳರ ಹಾವಳಿಗೆ ಬ್ರೇಕ್ ಮಾತ್ರ ಬಿದ್ದಿರಲಿಲ್ಲ. ಹೀಗಾಗಿ ಕೊನೆಗೆ ವಿಧಿ ಇಲ್ಲದೇ, ಗ್ರಾಮಸ್ಥರೇ ಕಳ್ಳರನ್ನು ಹಿಡಿಯಲು ಪ್ಲಾನ್ ಮಾಡಿದ್ದಾರೆ.

    ಇದನ್ನೂ ಓದಿ: ಚಾಕೊಲೇಟ್ ಕೊಡುವುದಾಗಿ ನಂಬಿಸಿ ಮಕ್ಕಳ ಕಳ್ಳತನಕ್ಕೆ ಯತ್ನ; ಯುವಕ ಪೊಲೀಸ್ ಸುಪರ್ಧಿಗೆ

    ಕಳ್ಳನನ್ನು ಹಿಡಿದೇ ತೀರಬೇಕು ಎಂದು ಗ್ರಾಮಸ್ಥರು ರಾತ್ರಿ ಪೂರ್ತಿ ಕಾದು ಕುಳಿತಿದ್ದಾರೆ. ಬೈಕ್ ಕಳ್ಳತನಕ್ಕೆ ಬಂದಿದ್ದ ಮೂವರ ಪೈಕಿ ಓರ್ವ ಸೆರೆಯಾಗಿದ್ದಾನೆ. ಈತ, ಬೈಕ್ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಸಂದರ್ಭ ಇನ್ನೂ ಒಬ್ಬ ಕಳ್ಳ ಪರಾರಿ ಆಗಿದ್ದಾನೆ ಎನ್ನಲಾಗಿದೆ.

    ಕಡೆಗೂ ಕೈಗೆ ಸಿಕ್ಕ ಕಳ್ಳನನ್ನು ಗ್ರಾಮಸ್ಥರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಜನರು, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದರಿಂದ ಕಳ್ಳನ ಕಾಲು ಮುರಿದಿದ್ದು ಗಂಭೀರವಾಗಿ ಗಾಯಗೊಂಡಿದ್ದ ಕಳ್ಳನನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭ, ಆಂಬ್ಯುಲೆನ್ಸ್ ಮೂಲಕ ಕಳ್ಳನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಇದನ್ನೂ ಓದಿ: ಸಿಕ್ಕಸಿಕ್ಕ ಲಿಂಕ್ ಮೇಲೆ ಒತ್ತಿದರೆ ಕನ್ನ ಗ್ಯಾರಂಟಿ: ಸೇವಾಸಿಂಧು ಹೆಸರಿನಲ್ಲಿ ನಕಲಿ ವೆಬ್​ಸೈಟ್/ಲಿಂಕ್ ಸೃಷ್ಟಿಸಿ ಹರಿಬಿಟ್ಟ ಸೈಬರ್ ಕಳ್ಳರು

    ಆನೇಕಲ್ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳನ ವಿರುದ್ಧ ಪ್ರಕರಣ ದಾಖಲಾಗಿದ್ದು ಕಳ್ಳನ ಕಾಲು ಮುರಿಯುವಂತೆ ಹಲ್ಲೆ ನಡೆಸಿದ ಗ್ರಾಮಸ್ಥರ ಮೇಲೂ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts