ಅಂಗಡಿಗೆ ನುಗ್ಗಿದ ಎಎನ್‌ಎಫ್ ವಾಹನ

ANF
Published on

ಬೆಳ್ತಂಗಡಿ: ನಾರಾವಿ ಪೇಟೆಯಲ್ಲಿರುವ ದಿನಸಿ ಅಂಗಡಿಗೆ ಗುರುವಾರ ನಕ್ಸಲ್ ನಿಗ್ರಹ ದಳದ ಜೀಪು ನಿಯಂತ್ರಣ ತಪ್ಪಿ ನುಗ್ಗಿದ ಪರಿಣಾಮ ಅಂಗಡಿಯಲ್ಲಿದ್ದ ಈದು ನಿವಾಸಿ ಶಾಂತಾ (58) ಗಾಯಗೊಂಡಿದ್ದಾರೆ.
ಕರ್ತವ್ಯ ನಿಮಿತ್ತ ಕಾರ್ಕಳ ಎಎನ್‌ಎಫ್‌ನ ನಾಲ್ವರು ಪೊಲೀಸರು ಮಡಿಕೇರಿ ಕಡೆಗೆ ಹೊರಟಿದ್ದರು. ಚಾಲಕನ ನಿಯಂತ್ರಣ ತಪ್ಪಿದ ವಾಹನ ನಾರಾವಿ ಕುತ್ಲೂರು ರಮೇಶ್ ಪೂಜಾರಿ ಅವರ ಮಾಲೀಕತ್ವದ ದಿನಸಿ ಅಂಗಡಿಯೊಳಗೆ ನುಗ್ಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ವೇಣೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net