

JAWAN MOVIE: ಅಭಿಮಾನಿಗಳು ಸಾಮಾನ್ಯವಾಗಿ ತಮ್ಮ ನೆಚ್ಚಿನ ನಟರ ಮೇಲಿನ ಪ್ರೀತಿಯನ್ನು ತೋರಿಸುವಾಗ ಮಿತಿಮೀರಿ ಹೋಗುತ್ತಾರೆ ಮತ್ತು ಆಗಾಗ್ಗೆ ಅವರ ಹೆಸರು ಅಥವಾ ಮುಖವನ್ನು ಅವರ ದೇಹದ ಮೇಲೆ ಹಚ್ಚೆ ಹಾಕುವ ಮಟ್ಟಕ್ಕೆ ಹೋಗುತ್ತಾರೆ. ಅದರಲ್ಲೂ ಶಾರೂಖ್ಗೆ ಇರುವ ಫ್ಯಾನ್ ಬೇಸ್ ತುಂಬಾ ದೊಡ್ಡದು, ಸಿನಿರಂಗದ ಎಲ್ಲಾ ಭಾಷೆಯಲ್ಲೂ ಶಾರುಖ್ ಖಾನ್ಗೆ ಫ್ಯಾನ್ ಫಾಲೋವರ್ಸ್ ಇದ್ದಾರೆ.
ಇದೀಗ ವೆಂಟಿಲೇಟರ್ನಲ್ಲಿದ್ದರೂ ತನ್ನ ಪ್ರೀತಿಯ ನಟನ ‘ಜವಾನ್’ ಸಿನೆಮಾ ನೋಡಲು ದಿವ್ಯಾಂಗ ವ್ಯಕ್ತಿಯೊಬ್ಬರು ಥಿಯೇಟರ್ ಕಡೆಗೆ ಮುಖ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Xನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋವನ್ನ ಸಾಕಷ್ಟು ಮಂದಿ ರೀ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ದಿವ್ಯಾಂಗವುಳ್ಳ ಅನೀಸ್ ಫಾರೂಕಿ ಎಂಬ ಶಾರುಖ್ ಖಾನ್ ಅಭಿಮಾನಿ ವೆಂಟಿಲೇಟರ್ನಲ್ಲಿದ್ದರೂ ತನ್ನ ಪ್ರೀತಿಯ ನಟನ ‘ಜವಾನ್’ ಸಿನೆಮಾ ನೋಡಲು ಥಿಯೇಟರಿಗೆ ಹೋಗಿದ್ದ ವಿಡಿಯೋ ಇದೀಗ ವೈರಲ್ ಆಗಿದೆ. ಗಾಲಿಕುರ್ಚಿಯಲ್ಲಿ ಅವಶ್ಯಕ ಚಿಕಿತ್ಸಾ ಸಾಧನಗಳೊಂದಿಗೆ ಅನೀಸ್ ಬರೋದನ್ನ ಕಾಣಬಹುದು.
ವಿಡಿಯೋ ನೋಡಿದ ನೆಟ್ಟಿಗರು ಈತನ ಆಸ್ಥೆ, ಅಭಿಮಾನದ ಪಾರಕ್ಕೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಅನೇಕ ನೆಟ್ಟಿಗರು ಅನೀಸ್ ಬೇಗ ಗುಣಮುಖಹೊಂದಲಿ ಎಂದು ಹಾರೈಸಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಲಠಾದ ಈ ವಿಡಿಯೋ ಅನ್ನು ಈತನಕ 1.3 ಲಕ್ಷ ಜನರು ನೋಡಿದ್ದಾರೆ. ಸುಮಾರು 4,000 ಲೈಕ್ ಮಾಡಿದ್ದಾರೆ. 805 ಜನರು ರೀಪೋಸ್ಟ್ ಮಾಡಿದ್ದಾರೆ. ಅನೇಕ ನೆಟ್ಟಿಗರು ಅನೀಸ್ ಬೇಗ ಗುಣಮುಖಹೊಂದಲಿ ಎಂದು ಹಾರೈಸಿದ್ದಾರೆ.