ಮದ್ವೆ ಖುಷಿಯಲ್ಲಿದ್ದ ಆಂಧ್ರದ ಯುವತಿ ವಿವಾಹ ದಿನದಂದೇ ಅಮೆರಿಕದಲ್ಲಿ ಆತ್ಮಹತ್ಯೆಗೆ ಶರಣು!

Girl
Published on

ಚಿತ್ತೂರ್​: ಆಕಸ್ಮಿಕವಾಗಿ ಮದುವೆ ರದ್ದಾ ಕಾರಣದಿಂದ ಆಂಧ್ರ ಪ್ರದೇಶ ಮೂಲದ ಯುವತಿಯೊಬ್ಬಳು ಮದುವೆ ನಡೆಯಬೇಕಿದ್ದ ದಿನದಂದೇ ಆತ್ಮಹತ್ಯೆ ಶರಣಾಗಿರುವ ಘಟನೆ ಅಮೆರಿಕಾದ ದಲ್ಲಾಸ್​ನಲ್ಲಿ ನಡೆದಿದೆ.

ಯುವತಿ ಸಾವಿನಿಂದ ಆಂಧ್ರದ ಚಿತ್ತೂರ್​ ಜಿಲ್ಲೆಯ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಯುವತಿ ಮೃತದೇಹವು ಎರಡು ದಿನಗಳಲ್ಲಿ ತವರಿಗೆ ಹಸ್ತಾಂತರವಾಗಲಿದೆ. ನಿಗದಿಯಾಗಿದ್ದ ಮದುವೆ ಯಾವ ಕಾರಣಕ್ಕೆ ಮರಿದುಬಿದ್ದಿತು? ಎಂಬ ವಿಚಾರ ನಿಗೂಢವಾಗಿಯೇ ಉಳಿದಿದ್ದು, ತನಿಖಾ ನಂತರವೇ ತಿಳಿದುಬರಲಿದೆ.

ಘಟನೆಯ ವಿವಿರಣೆಗೆ ಬರುವುದಾದರೆ, ಸುಷ್ಮಾ ಅಮೆರಿಕಾದ ದಲ್ಲಾಸ್​ನಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದರು. ಚಿತ್ತೂರ್​ ಜಿಲ್ಲೆಯ ಪುಥಲಪಟ್ಟು ಮಂಡಲದ ಬಂಡಾರ್ಲಪಲ್ಲಿಯ ಭರತ್​ ಎಂಬಾತನ ಜತೆ ಸುಷ್ಮಾಗೆ ಮದುವೆ ನಿಶ್ಚಯವಾಗಿತ್ತು. ಮದುವೆ ಮಾರ್ಚ್​ 4ಕ್ಕೆ ನಿಗದಿಯಾಗಿತ್ತು. ಅದಕ್ಕೂ ಮುನ್ನವೇ ಭರತ್​ ಮನೆಯವರು ಮದುವೆ ಮುರಿದುಕೊಂಡರು.

ಆಕಸ್ಮಿಕವಾರಿ ಮದುವೆ ರದ್ದಾದ ನೋವಿನಿಂದ ಸುಷ್ಮಾ ಖಿನ್ನತೆಗೆ ಜಾರಿದ್ದರು. ಇದೇ ನೋವಿನಲ್ಲಿ ಮದುವೆಯ ದಿನದಂದೇ ದಲ್ಲಾಸ್​ನಲ್ಲಿ ತನ್ನ ನಿವಾಸದಲ್ಲಿ ಸುಷ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರ ಕೇಳಿ ಸುಷ್ಮಾ ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ. ಇನ್ನು ಎರಡು ದಿನಗಳಲ್ಲಿ ಆಕೆಯ ಮೃತದೇಹ ಕುಟುಂಬಕ್ಕೆ ಹಸ್ತಾಂತರವಾಗಲಿದೆ.

ಇತ್ತ ಭರತ್​ ಮನೆಯವರ ವಿರುದ್ಧ ಸುಷ್ಮಾ ಮನೆಯವರು ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net