ಮದ್ವೆಯಾದ ಮೂರೇ ತಿಂಗಳಲ್ಲಿ ಎಸ್​ಐ ಸಾವು: ಬ್ಯೂಟಿ ಹಿಂದೆ ಬಿದ್ದ ಪೊಲೀಸಪ್ಪನ ದುರಂತ ಕತೆ ಇದು!

SI
Published on

ವಿಜಯವಾಡ: ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಪೊಲೀಸ್​ ಸಬ್​ಇನ್ಸ್​ಪೆಕ್ಟರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಗುಡಿವಾಡದಲ್ಲಿ ನಡೆದಿದೆ.

ಗುಡಿವಾಡ ಠಾಣೆಯ ಎಸ್​ಐ ವಿಜಯ್ ​ಕುಮಾರ್ ಆತ್ಮಹತ್ಯೆ ಮಾಡಿಕೊಂಡವರು. ತಮ್ಮ ಅಪಾರ್ಟ್​ಮೆಂಟ್​ನಲ್ಲಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಯ ಹಿಂದೆ ವಿವಾಹೇತರ ಸಂಬಂಧವಿರುವ ಶಂಕೆಯನ್ನು ಸಹೋದ್ಯೋಗಿಗಳು ವ್ಯಕ್ತಪಡಿಸಿದ್ದಾರೆ. ​​

ವೆಸ್ಟ್​ ಗೋದಾವರಿ ಜಿಲ್ಲೆಯ ಏಳೂರಿನ 2012ನೇ ಬ್ಯಾಚ್ ಎಸ್​ಐ ಆಗಿದ್ದ ವಿಜಯ್​ಕುಮಾರ್​, ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ನೋಜೀಡು ಮೂಲದ ಬ್ಯೂಟಿಷಿಯನ್​ ಜತೆಗೆ ವಿವಾಹೇತರ ಸಂಬಂಧ ಹೊಂದಿದ್ದ ಆರೋಪದ ಮೇಲೆ ವಿಜಯ್​ ಕುಮಾರ್ ಒಮ್ಮೆ ಅಮಾನತ್ತು ಶಿಕ್ಷೆಗೆ ಗುರಿಯಾಗಿದ್ದರು.

ಶಿಕ್ಷೆ ಅವಧಿ ಮುಗಿದ ಬಳಿಕ ಗುಡಿವಾಡ ಉಪವಲಯದ ಅನೇಕ ಠಾಣೆಗಳಲ್ಲಿ ಎಸ್​ಐ ಆಗಿ ವಿಜಯ್​ ಕಾರ್ಯ ನಿರ್ವಹಿಸಿದ್ದರು. ಮೂರು ತಿಂಗಳ ಹಿಂದಷ್ಟೇ ಏಳೂರು ಮೂಲದ ಮಹಿಳೆಯೊಬ್ಬರನ್ನು ಮದುವೆಯಾಗಿದ್ದರು. ವಿವಾಹವಾದರೂ ಪತ್ನಿಯನ್ನು ಕರೆತರದೆ ಕಪೂರಾದಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ಬ್ಯೂಟಿಷಿಯನ್​ ಜತೆಯಲ್ಲೇ ಉಳಿದುಕೊಂಡಿದ್ದರು.

ಇದೀಗ ಸಾವಿಗೀಡಾಗಿದ್ದು, ಬ್ಯೂಟಿಷಿಯನ್​ ಒತ್ತಡದಿಂದಲೇ ಮೃತಪಟ್ಟಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವಿಜಯ್​ ಮೃತದೇಹವನ್ನು ಗುಡಿವಾಡ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net