ಜನ ಸಾಮಾನ್ಯರಂತೆ ಆಟೋದಲ್ಲಿ ಪ್ರಯಾಣಿಸಿದ ಆಂಧ್ರ ಡಿಸಿಎಂ Pawan Kalyan ಮಗಳು!

Pawan Daughter Aadhya
Published on

ಆಂಧ್ರಪ್ರದೇಶ: (Pawan Kalyan )  ಚಲನಚಿತ್ರ ನಟ, ಜನಸೇನಾ ನಾಯಕ, ಎಪಿ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಮಗಳು  ಜನಸಾಮಾನ್ಯರಂತೆ ಆಟೋದಲ್ಲಿ ಪ್ರಯಾಣ ಮಾಡಿದ್ದಾರೆ. ಈ ಕುರಿತಾದ ವಿಡಿಯೋ ವೈರಲ್​ ಆಗುತ್ತಿದ್ದಂತೆ. ಈಕೆ ಸರಳತೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ಪವನ್ ಕಲ್ಯಾಣ್ ಸಿನಿಮಾರಂಗದಲ್ಲಿ ಪವರ್ ಸ್ಟಾರ್ ಆಗಿ, ಒಂದೇ ಚಿತ್ರಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುವ ಮಟ್ಟದಲ್ಲಿದ್ದರೂ, ರಾಷ್ಟ್ರ ರಾಜಕಾರಣದಲ್ಲೂ ಪ್ರಮುಖ ಪಾತ್ರ ವಹಿಸಿದ್ದರೂ, ಅವರು ಮತ್ತು ಅವರ ಕುಟುಂಬದವರು ಜನ ಸಾಮಾನ್ಯರಂತೆ ಜೀವನ ಆಯ್ಕೆ ಮಾಡಿರುವುದು ದೊಡ್ಡ ವಿಷಯ.

ಇತ್ತೀಚೆಗಷ್ಟೇ ಪವನ್ ಕಲ್ಯಾಣ್ ಪುತ್ರಿ ಆದ್ಯಾ ಆಟೋದಲ್ಲಿ ಪ್ರಯಾಣಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ಮತ್ತು ನಟಿ ರೇಣು ದೇಸಾಯಿ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ರೇಣು ಅವರು ಕಾಶಿಯಲ್ಲಿ  ಆದ್ಯಾ ಅವರೊಂದಿಗೆ ಆಟೋ ಸವಾರಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಪವನ್ ಅಭಿಮಾನಿಗಳು ಕಮೆಂಟ್ಸ್ ರೂಪದಲ್ಲಿ ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ತಂದೆ ಒಂದು ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದರೂ ಮಗಳು ಎಷ್ಟು ಸಿಂಪಲ್ ಎಂದು ಕಮೆಂಟ್ಸ್ ಮಾಡುತ್ತಿದ್ದಾರೆ. ಆದ್ಯಾ ಅಷ್ಟೇ ಅಲ್ಲ ಉಳಿದ ಇಬ್ಬರು ಮಕ್ಕಳೂ ತುಂಬಾ ಸಿಂಪಲ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net