ನೀವು ಇಲ್ಲದಿದ್ದರೆ, ನಾನು ಇಲ್ಲ, ತಾಯಿಯ ಸಹಕಾರ ಸ್ಮರಿಸಿದ ಪೈಲಟ್​ ವಿಡಿಯೋ ಪುಲ್​​ ವೈರಲ್​ ! | Andhra pilot

Andhra pilot
Published on

Andhra pilot: ಆಂಧ್ರಪ್ರದೇಶದ ಮೂಲದ ಪೈಲಟ್ ಒಬ್ಬರು ತಮ್ಮ ತಾಯಿ, ತಮ್ಮ ಕನಸುಗಳನ್ನು ನನಸಾಗಿಸಲು ಹೇಗೆ ನೆರವಾದರೂ ಎಂದು ಹೇಳಿಕೊಳ್ಳತ್ತಾ, ವಿಮಾನದಲ್ಲಿ ಸ್ವಾಗತಿಸಿ ವಿಶೇಷ ಗೌರವ ಸಲ್ಲಿಸಿದರು. ಇಂಡಿಗೋ ಕ್ಯಾಪ್ಟನ್ ಜಸ್ವಂತ್ ವರ್ಮಾರ ವಿಮಾನದಲ್ಲಿನ ಘೋಷಣೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಪುಲ್​​ ವೈರಲ್​ ಆಗಿದೆ.

ವಿಮಾನದ ಪ್ರವೇಶದ್ವಾರದಲ್ಲಿ ನಿಂತಿದ್ದ ಕ್ಯಾಪ್ಟನ್ ವರ್ಮಾ, ತಮ್ಮ ತಾಯಿಯ ಸ್ವಾಗತಿಸುತ್ತಿರುವುದನ್ನು ಕಾಣಬಹುದು. ಇದಾದ ನಂತರ ತನ್ನ ತಾಯಿಯೊಂದಿಗೆ ಪ್ರಯಾಣಿಕನಾಗಿ ವಿಮಾನ ಹಾರಾಟ ನಡೆಸುತ್ತಿರುವುದು ಇದೇ ಮೊದಲು ಎಂದು ಹೇಳಿಕೊಳ್ಳುತ್ತಾರೆ.

ಕ್ಯಾಪ್ಟನ್ ಜಸ್ವಂತ್ ವರ್ಮಾ ಹೇಳಿದ್ದೇನು..?

ನನ್ನ ತಾಯಿಯ ನೈತಿಕ ಬೆಂಬಲ ನೀಡುವುದರೊಂದಿಗೆ, ಅಧ್ಯಯನಕ್ಕೆ ಹಣಕಾಸು ಒದಗಿಸಿದ್ದು, ಅವರು ನನಗಾಗಿ ಎಲ್ಲವನ್ನು ಮಾಡಿದ್ದಾರೆ, ನಾನು ಇಂದು ಕ್ಯಾಪ್ಟನ್ ಆಗಿ ಇಲ್ಲಿ ನಿಂತಿದ್ದೇನೆ, ವಿಮಾನ ಹಾರಿಸುತ್ತಿದ್ದೇನೆ ಎಂದರೆ ಅದಕ್ಕೆ ನನ್ನ ತಾಯಿಯೇ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.

ಜಸ್ವಂತ್ ವರ್ಮಾ ತಮ್ಮ ತಾಯಿಯನ್ನು ಪರಿಚಯಿಸಿದ ತಕ್ಷಣ, ಇಡೀ ವಿಮಾನವು ಚಪ್ಪಾಳೆ ತಟ್ಟುತ್ತದೆ, ಅದರಲ್ಲೂ ಒಬ್ಬ ವ್ಯಕ್ತಿ ವಿಶೇಷವಾಗಿ ಎದ್ದು ನಿಂತು ಚಪ್ಪಾಳೆ ತಟ್ಟುತ್ತಾನೆ. ಆಂಧ್ರಪ್ರದೇಶದ ತಿರುಪತಿ ಬಳಿಯ ಬಹಳ ದೂರದ ಹಳ್ಳಿಯವರು ಎಂದು ವಿವರಿಸುತ್ತಾ , ತಮ್ಮ ಪ್ರದೇಶದ ಯಾರಾದರೂ ಪೈಲಟ್ ಆಗಬೇಕೆಂದು ಬಯಸುವುದು ಕಲ್ಪನೆಗೂ ಮೀರಿದ್ದು ಎಂದು ಹೇಳಿಕೊಂಡಿದ್ದಾರೆ. ನೀವು ಇಲ್ಲದಿದ್ದರೆ, ನಾನು ಇರಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ವರ್ಮಾ ತಮ್ಮ ಮಾತು ಮುಗಿಸಿದರು.

ಸಾಮಾಜಿಕ ಜಾಲತಾಣ ಬಳಕೆದಾರರ ಪ್ರತಿಕ್ರಿಯೆ

"ಓಹ್, ಅದು ತುಂಬಾ ಮುದ್ದಾಗಿದೆ. ನಿಮ್ಮ ಅಮ್ಮನ ಸಂತೋಷ ನಮ್ಮ ಹೃದಯಗಳನ್ನು ಕರಗಿಸುತ್ತದೆ" ಎಂದು ಒಬ್ಬರು ಪೋಸ್ಟ್ ಮಾಡಿದ್ದಾರೆ. ಮತ್ತೊಬ್ಬರು, "ಈ ವೀಡಿಯೊ ನನ್ನ ಹೃದಯವನ್ನು ಆವರಿಸಿದೆ" ಎಂದು ಬರೆದುಕೊಂಡಿದ್ದಾರೆ.

ಮೂರನೇ ವ್ಯಕ್ತಿ "ಅಮ್ಮನೊಂದಿಗೆ ಮತ್ತು ಕರ್ತವ್ಯದಲ್ಲಿ ಹಾರುವ ಅನುಭವ" ಎಂದು ಪೋಸ್ಟ್ ಮಾಡಿದ್ದಾರೆ. ನಾಲ್ಕನೆಯವರು "ನಾನು ಈ ವೀಡಿಯೊ ನೋಡುತ್ತಿರುವಾಗ, ನಾನು ಕಣ್ಣಿರು ಹಾಕಿದ್ದೇನೆ" ಎಂದು ಬರೆದಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net