ಹೊರನಾಡಿಗೆ ಆಂಧ್ರ ಸಚಿವೆ ರೋಜಾ ಭೇಟಿ

4kls3
ಆಂಧ್ರ ಪ್ರದೇಶದ ಪ್ರವಾಸೋದ್ಯಮ ಸಚಿವೆ ರೋಜಾ ತನ್ನ ಕುಟುಂಬಸ್ಥರ ಜತೆ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು.
Published on

ಕಳಸ: ಆಂಧ್ರ ಪ್ರದೇಶದ ಪ್ರವಾಸೋದ್ಯಮ ಸಚಿವೆ ಖ್ಯಾತ ಚಲನಚಿತ್ರ ನಟಿ ಶ್ರೀಮತಿ ರೋಜಾ ತನ್ನ ಕುಟುಂಬಸ್ಥರ ಜತೆ ಶುಕ್ರವಾರ ಹೊರನಾಡಿನ ಶ್ರೀಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬೆಳಗ್ಗೆ ಹೊರನಾಡಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು, ಅರ್ಚನೆ ಮಾಡಿಸಿ ನಂತರ ಪ್ರಸಾದ ಭೋಜನ ಸ್ವೀಕರಿಸಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪ್ರಯಾಣ ಬೆಳೆಸಿದರು. ಕಳಸ ಪೊಲೀಸರು ಸೂಕ್ತ ಬಂದೋಬಸ್ತು ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net